Property dispute: 28 ಎಕರೆ ಜಮೀನಿಗಾಗಿ ಕಿತ್ತಾಟ -ಸೇನೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ಬಂದಿದ್ದ ತಮ್ಮನ ರುಂಡ ಚೆಂಡಾಡಿದ ಅಣ್ಣ!
ಅವರು ಐದು ಜನ ಅಣ್ತಮ್ಮಾಸ್! ಅವರಲ್ಲೊಬ್ಬರು ಕೊಲೆಯಾಗಿದ್ದಾರೆ. ಹೆಸರು ಸುರೇಶ್ ಖಣಗಾಂವಿ ಅಂತಾ, 25 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದರು.
ಆದರೆ ಈ ಅಣ್ತಮ್ಮಂದಿರ ನಡುವೆ ಇತ್ತಿಚಿನ ದಿನಗಳಲ್ಲಿ 28 ಎಕರೆ ಜಮೀನಿಗಾಗಿ ಕಿತ್ತಾಟ ಶುರುವಾಗಿತ್ತು.
ಅವರು ಐದು ಜನ ಅಣ್ತಮ್ಮಾಸ್! ಓರ್ವ ಕಷ್ಟಪಟ್ಟು ಓದಿ ಸೇನೆಗೆ ಸೇರಿಕೊಂಡು 25 ವರ್ಷ ಗಡಿಯಲ್ಲಿ ಸೇವೆ ಸಲ್ಲಿಸಿ ಗ್ರಾಮಕ್ಕೆ ವಾಪಾಸ್ ಆಗಿದ್ದರೆ ಇನ್ನುಳಿದ ಅಣ್ತಮ್ಮಂದಿರು (brothers) ಉಳುಮೆ ಮಾಡಿಕೊಂಡು (property dispute) ಜೀವನ ಕಟ್ಟಿಕೊಳ್ಳುತ್ತಿದ್ದರು. ಹೀಗಿದ್ದ ಮನೆಯಲ್ಲಿ ನಿನ್ನೆ ಭಾನುವಾರ ನಡೆಯಬಾರದ ಘಟನೆ ನಡೆದು ಹೋಗಿದೆ. ತುಂಡು ಜಮೀನಿಗಾಗಿ ಒಡಹುಟ್ಟಿದ ತಮ್ಮನನ್ನೇ ಕೊಂದು ಅಣ್ಣ ರಣಕೇಕೆ ಹಾಕಿದ್ದಾನೆ.
ಅಷ್ಟಕ್ಕೂ ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸಿರುವ ಕೊಲೆಗೆ ಕಾರಣವೇನು?
ಜಮೀನಿನಲ್ಲಿ ನಡೆದಿದ್ದಾದ್ರೂ ಎನೂ ಅಂತೀರಾ? ಈ ಸ್ಟೋರಿ ನೋಡಿ.
ಬಿತ್ತನೆ ಮಾಡಿ ಬೆಳೆ ತೆಗೆಯಬೇಕಿದ್ದ ಜಮೀನಿನಲ್ಲಿ ಇಂದು ರಕ್ತದ ಕೋಡಿ ಹರಿದಿರುವುದು, ಎಲ್ಲೆಂದರಲ್ಲಿ ಬಿದ್ದ ಚಪ್ಪಲಿ, ಮೊಬೈಲ್, ಮನೆಯ ಯಜಮಾನನ್ನ ಕಳೆದುಕೊಂಡ ಕುಟುಂಬಸ್ಥರ ಗೋಳಾಟ.
ಸ್ಥಳಕ್ಕೆ ಎಸ್.ಪಿ. ನೇತೃತ್ವದ ತಂಡ ಭೇಟಿ ಪರಿಶೀಲನೆ, ಗ್ರಾಮಕ್ಕೆ ಗ್ರಾಮವೇ ಬೆಚ್ಚಿ ಬಿದ್ದಿರುವುದು ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ (Bailhongal) ತಾಲೂಕಿನ ತಿಗಡಿ ಗ್ರಾಮದಲ್ಲಿ.
ಹೌದು ಇಲ್ಲಿ ಕೊಲೆಯಾಗಿರುವ ವ್ಯಕ್ತಿಯ ಹೆಸರು ಸುರೇಶ್ ಖಣಗಾಂವಿ ಅಂತಾ 25 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದ ಸುರೇಶ್, ಒಂದೂವರೆ ವರ್ಷದ ಹಿಂದೆ ನಿವೃತ್ತಿ ಹೊಂದಿ ಊರಿಗೆ ವಾಪಾಸ್ ಆಗಿದ್ದರು (Belagavi Soldier muder).
ಹೀಗೆ ಬಂದ್ರೂ ತಿಗಡಿ ಊರು ಬಿಟ್ಟು ಬೈಲಹೊಂಗಲ ಪಟ್ಟಣದಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲಿ ವಾಸ ಮಾಡುತ್ತಿದ್ದರು ಸುರೇಶ್. ಇನ್ನುಳಿದ ನಾಲ್ಕು ಜನ ಅಣ್ತಮ್ಮಂದಿರು ಬೇರೆ ಬೇರೆ ಮನೆ ಮಾಡಿಕೊಂಡು ಜೀವನ ಮಾಡ್ತಿದ್ದರು.
ಆದರೆ ಈ ಅಣ್ತಮ್ಮಂದಿರ ನಡುವೆ ಇತ್ತಿಚಿನ ದಿನಗಳಲ್ಲಿ 28 ಎಕರೆ ಜಮೀನಿಗಾಗಿ ಕಿತ್ತಾಟ ಶುರುವಾಗಿತ್ತು. ಈ ವಿಚಾರ ಗ್ರಾಮದಲ್ಲಿನ ಮುಖಂಡರ ನಡುವೆ ಕೂಡ ಬಗೆಹರಿಸಲು ಆಗದೇ ಠಾಣೆ ಮೆಟ್ಟಿಲೇರಿತ್ತು. ಆದ್ರೇ ಮಳೆಗಾಲ ಆರಂಭವಾಗ್ತಿರುವ ಕಾರಣಕ್ಕೆ ಬಿತ್ತನೆ ಮಾಡಲು ಇಂದು ಅಣ್ಣ ಶಂಕರ್ ತನ್ನ ಇಬ್ಬರು ಮಕ್ಕಳನ್ನ ಕರೆದುಕೊಂಡು ವ್ಯಾಜ್ಯವಿದ್ದ ಜಮೀನಿಗೆ ಉಳುಮೆ ಮಾಡಲು ಹೋಗಿದ್ದಾನೆ.
ಈ ವಿಚಾರ ಬೈಲಹೊಂಗಲದಲ್ಲಿದ್ದ ಸುರೇಶ್ ಗೆ ಗೊತ್ತಾಗಿದ್ದು ಕೂಡಲೇ ಅಲ್ಲಿಂದ ಜಮೀನಿಗೆ ಬಂದಿದ್ದಾನೆ. ಉಳುಮೆ ಮಾಡುತ್ತಿದ್ದ ಶಂಕರ್ ಗೆ ಪ್ರಶ್ನೆ ಮಾಡುತ್ತಿದ್ದಂತೆ ಇಬ್ಬರು ಮಕ್ಕಳ ಜತೆಗೆ ಸೇರಿಕೊಂಡು ಸುರೇಶ್ ಮೇಲೆ ಹಲ್ಲೆ ಮಾಡಿ ಕುಡಗೋಲಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಸಲು ಬಂದ ಸೆದೆಪ್ಪಾನ ಮೇಲೆಯೂ ಶಂಕರ್ ಮತ್ತು ಮಕ್ಕಳು ಹಲ್ಲೆ ಮಾಡಿದ್ದಾರೆ. ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇನ್ನು ಶಂಕರ್ ತಮ್ಮನ ಹತ್ಯೆ ಮಾಡಿ ಕುಡಗೋಲು ಸಮೇತ ಬೇರೊಂದು ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಮತ್ತಿಬ್ಬರು ತಮ್ಮಂದಿರನ್ನೂ ಕೊಚ್ಚಿ ಕೊಲೆ ಮಾಡಲು ಹೋಗಿದ್ದಾನೆ. ವಿಚಾರ ಗೊತ್ತಾಗಿ ಆ ಇಬ್ಬರು ಅಣ್ತಮ್ಮಂದಿರು ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾರೆ. ಇತ್ತ ಕೊಲೆ ಮಾಡಿ ಶಂಕರ್ ಠಾಣೆಗೆ ಹೋದ್ರೇ ಆತನ ಮಕ್ಕಳು ಊರು ಬಿಟ್ಟಿದ್ದಾರೆ.


