ನಿಪನಾಳ: ಬಿರು ಬೇಸಗೆ ಕಳೆದು ಮುಂಗಾರು ಮನೆ ಬಾಗಿಲಿಗೆ ಬರುವ ಹಬ್ಬವೇ ಕಾರ ಹುಣ್ಣಿಮೆ.!
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ಇಂದು ಕಾರು ಹುಣ್ಣಿಮೆಯ ಸಂಭ್ರಮ ಎತ್ತುಗಳ ಮೆರವಣಿಗೆ ಮಾಡುತ್ತಾ ಗ್ರಾಮದ ಪ್ರಮುಖ ರಸ್ತೆಯ ಮೂಲಕ ನೆರೆವೇರಿತು.
ಮುಂಗಾರು ಆರಂಭದ ಮೊದಲ ಹಬ್ಬ ಕಾರು ಹುಣ್ಣಿಮೆ.
ಜತೆಗೆ ಸಾಂಸ್ಕೃತಿಕವಾಗಿ ವೈಶಿಷ್ಟ್ಯ ಹೊಂದಿದೆ. ಬೇಸಗೆಯಲ್ಲಿ ಹೊಲವನ್ನು ಉತ್ತು, ಹದ ಮಾಡಿದ ಎತ್ತುಗಳಿಗೆ ಈ ಹಬ್ಬದ ಅನಂತರ ವಿಶ್ರಾಂತಿ ನೀಡಲಾಗುತ್ತದೆ.
ಕಾರು ಹುಣ್ಣಿಮೆಯೂ ಮನುಷ್ಯ ಮತ್ತು ಪಶುಗಳ ನಡುವಿನ ಅನೂಹ್ಯ ಸಂಬಂಧವನ್ನು ತಿಳಿಸುತ್ತದೆ. ಅಲ್ಲದೇ ಕೃಷಿ ಸಂಸ್ಕೃತಿಯ
ಕಾರ ಹುಣ್ಣಿಮೆಯ ದಿನದಂದು ಸೂರ್ಯನ ತೇಜೋರಶ್ಮಿ ಕಿರಣಗಳನ್ನು ಸ್ವಾಗತಿಸಿದ ಬಳಿಕ ಎತ್ತುಗಳನ್ನು ಸ್ನಾನಕ್ಕೆಂದು ಹಳ್ಳ,ನದಿ, ಕೆರೆಗೆ ಕರೆದೊಯ್ಯಲಾಗುತ್ತದೆ.
ಎತ್ತುಗಳಿಗೆ ಸ್ನಾನ ಮಾಡಿಸಿ, ವಿಧ ವಿಧವಾದ ಬಣ್ಣಗಳಲ್ಲಿ ಗುಲಾಲ್ ಹಚ್ಚಲಾಗುತ್ತದೆ. ಹಣೆಗಳಿಗೆ ಬಾಸಿಂಗ, ಹಣೆಪಟ್ಟಿ, ಕೊರಳಲ್ಲಿ ಘಂಟೆ, ಕೊರಳಿಗೆ ಚೆಂದದ ಫರಾರಿಯನ್ನು ಕಟ್ಟಿ ಮನೆಯವರೆಲ್ಲ ಸೇರಿ ಎತ್ತಿಗೂ ಪೂಜೆ ಮಾಡುತ್ತಾರೆ. ಬಳಿಕ ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಇಡೀ ಊರಿಗೆ ಊರೇ ಸೇರಿ ಒಗ್ಗಟ್ಟಾಗಿ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತದೆ.
ಕಾರು ಹುಣ್ಣಿಮೆ ಹಬ್ಬವು ಚಿಕ್ಕವರಿಂದಲೂ ನಮಗೆ ಖುಷಿ ತರುವ ಹಬ್ಬ.!
ಮನೆಯ ಎತ್ತುಗಳಿಗೆ ಅಲಂಕಾರ ಮಾಡಿ,ನಾವು ಹೊಸ,ಹೊಸ ಬಟ್ಟೆ ತೊಟ್ಟು ಸಂಭ್ರಮಿಸುವುದು ಜೀವಮಾನದ ಖುಷಿಗಳಲ್ಲಿ ಒಂದು.
ಇನ್ನೂ ಒಂದು ವಿಶೇಷ ಏನೆಂದರೆ ಈ ಹಬ್ಬದ ದಿನದಂದು ಮನೆಯಲ್ಲಿ ಮಾವಿನ ಹಣ್ಣಿನ ಸೀಕರಣೆ ಸಿಹಿಯಾದ ಹೋಳಿಗೆ ತುಪ್ಪದ ಊಟ, ವಿಶೇಷ ಪೂಜೆ ಪುನಸ್ಕಾರಗಳ ಮೂಲಕ ಹಂಚಿಕೊಳ್ಳಲಾಗುತ್ತದೆ.
ಈ ಕಾರು ಹುಣ್ಣಿಮೆಯು ವಿಶೇಷವಾಗಿ ಬೊಮ್ಮಣ್ಣ ನಾಯಿಕ,(ಗೌಡ್ರು) ಗೋವಿಂದ ನಾಯಿಕ, ಕೆಂಪಣ್ಣ ನಾಯಿಕ ಶಿವಾನಂದ ಕುರಬೇಟ,ಸಿದ್ದಪ್ಪ ಸನದಿ ಸತ್ಯಪ್ಪ ನಂದಿ ಊರಿನ ಗಣ್ಯರ ನೇತೃತ್ವದಲ್ಲಿ ಜರಗಿತು. ವರದಿ ಚಂದ್ರು ತಳವಾರ


