ಬೆಳಗಾವಿ: ೧೨ ನೇ ಪೊನ್ ಇನ್ ಕಾರ್ಯಕ್ರಮ ಯಶಸ್ವಿ
ಬೆಳಗಾವಿ ಜಿಲ್ಲೆಯಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಹಾಗೂ ಕಾನೂನಿನ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳಲು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳ ಪೊನ್ ಇನ್ ಕಾರ್ಯಕ್ರಮ. ಅರ್ಧ ಗಂಟೆಯಲ್ಲಿ ಠಾಣೆಗೆ ಬಂದವರ ದೂರನ್ನು ಸ್ವೀಕರಿಸಬೇಕು. ಇಲ್ಲದಿದ್ದರೇ ಸಂಬಂಧ ಪಟ್ಟವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಎಸ್ಪಿ ಡಾ. ಸಂಜೀವ ಪಾಟೀಲ.ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೆಲ ಫೋನ್ ಇನ್ ಕಾರ್ಯಕ್ರಮಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಎಸ್ಪಿ ಡಾ. ಸಂಜೀವ ಪಾಟೀಲ ತಂಡ ಶುಕ್ರವಾರ ನಡೆಸಿದ 12ನೇ ಫೋನ್ ಇನ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಜನಸ್ನೇಹಿ ಪೊಲೀಸ್ ಆಡಳಿತಕ್ಕೆ ಹೆಸರುವಾಸಿಯಾಗಿರುವ ಬೆಳಗಾವಿ ಜಿಲ್ಲಾ ಪೊಲೀಸ್ ರು ಸಾರ್ವಜನಿಕರಿಗೆ ಇನ್ನೂ ಹತ್ತಿರವಾಗುವ ನಿಟ್ಟಿನಲ್ಲಿ ನಡೆಸುತ್ತಿರುವ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನರು ಮುಕ್ತವಾಗಿ ಕುಟುಂಬ ಸಮಸ್ಯೆ, ಗಂಡ, ಹೆಂಡತಿಯ ಜಗಳ, ಸಂಚಾರ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಯನ್ನು ಹೇಳಿಕೊಂಡು ಜನರು ಎಸ್ಪಿ ಎದುರು ಅಳಲು ತೋಡಿಕೊಂಡರು.ಮುಗಳಖೋಡ ವ್ಯಕ್ತಿಯೊರ್ವ ಕರೆ ಮಾಡಿ ವಾಣಿಜ್ಯ ಮಳಿಗೆಗಳು ನಾಮಫಲಕಗಳು ಮಳೆ ಗಾಳಿಗೆ ರಸ್ತೆಯ ಬದಿಗೆ ಬಂದು ಬಿಳುತ್ತಿವೆ. ಅವುಗಳನ್ನು ತೆರವುಗೊಳಿಸುವಂತೆ ಎಸ್ಪಿ ಅವರಿಗೆ ಕರೆ ಮಾಡಿ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಬಂಧಿಸಿದವರಿಗೆ ಸೂಚನೆ ನೀಡಿ ತೆರವು ಮಾಡುವುದಾಗಿ ತಿಳಿಸಿದರು.
ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ವ್ಯಕ್ತಿಯೊರ್ವ ಕರೆ ಮಾಡಿ ಗ್ರಾಪಂನಲ್ಲಿನ ಸಿಬ್ಬಂದಿಯೊಬ್ಬರು ಜಾತಿ ನಿಂಧನೆ ಮಾಡಿದ್ದಾರೆ ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡುವಂತೆ ತಿಳಿಸಿದರು.ನಗರ ಪ್ರದೇಶದ ವ್ಯಕ್ತಿಯೊರ್ವ ಕರೆ ಮಾಡಿ ಕಾಲೇಜು ರಸ್ತೆಯ ಪಕ್ಕದಲ್ಲಿರುವ ರಸ್ತೆ, ಸರದಾರ್ಸ ಮೈದಾನ ಮುಂಭಾಗದಲ್ಲಿ ಸಾಕಷ್ಟು ಸಂಚಾರ ಸಮಸ್ಯೆಯಾಗುತ್ತಿದೆ. ಈ ಕುರಿತು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಎಸ್ಪಿ ಇದು ನಗರ ಪೊಲೀಸ್ ಇಲಾಖೆಗೆ ಬರುವುದರಿಂದ ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗುವುದು ಎಂದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ವೇಣುಗೋಪಾಲ, ಪೊಲೀಸ್ ಸಿಬ್ಬಂದಿಗಳಾದ ಡಿಎಸ್ಪಿ ಜೇಮ್ಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವರದಿ: ಚಂದ್ರು ತಳವಾರ


