ಜಯ ಕರ್ನಾಟಕ ಸಂಘಟನೆ ವತಿಯಿಂದ ರಕ್ತದಾನ ಶಿಬಿರ
ಗೋಕಾಕ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕರಾದ ದಿವಂಗತ ಎನ್.ಮುತ್ಯೆಪ್ಪರೈ ಅವರ 3 ನೇ ವರ್ಷದ ಪುಣ್ಯ ಸಂಸ್ಮರಣೆಯ ಅಂಗವಾಗಿ “ರಕ್ತದಾನ ಶಿಬಿರ” ಗೋಕಾಕ ಬ್ಲಡ್ ಬ್ಯಾಂಕ್ ಇವರ ಉಪಸ್ಥಿತಿಯಲ್ಲಿ ಸ್ಥಳೀಯ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗೋಕಾಕನ ಬ್ಲಡ್ ಬ್ಯಾಂಕ್ ಕಛೇರಿಯಲ್ಲಿ ರಕ್ತ ದಾನ ಶಿಬಿರ ಆಯೋಜಿಸಿದ್ದರು. ಶಿಬಿರದಲ್ಲಿ ಪಾಲ್ಗೊಂಡು 50ಕ್ಕೂ ಹೆಚ್ಚು ರಕ್ತ ದಾನ ನೀಡಿದರು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾದ್ಯಕ್ಷರಾದ ಮಲಿಕ ಜಾನ ತಲವಾರ ಮಾತನಾಡಿ ರಕ್ತ ಎಂಬ ಎರಡಕ್ಷರದ ಕೆಂಪು ದ್ರವ ನಮ್ಮೆಲ್ಲರ ದೇಹದ ಅತ್ಯಮೂಲ್ಯ ಅಂಶ. ಪ್ರತಿ ಹನಿ ರಕ್ತಕ್ಕೂ ಬಹಳ ಮೌಲ್ಯವಿದೆ. ನಾವು ಬದಕಲು ಕೆಂಪು ದ್ರವವೇ ಆಧಾರ.ಅಪಘಾತಕ್ಕೀಡಾದಾಗ, ಅನಾರೋಗ್ಯ ಪೀಡಿತರಾದಾಗ ಅಥವಾ ತೀವ್ರ ತರನಾದ ಅನಾರೋಗ್ಯಕ್ಕೆ ಒಳಗಾದಾಗ ರಕ್ತದ ಅಗತ್ಯ ಬೀಳುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಕಂಡುಬರುತ್ತದೆ ಹೀಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿಗೋಕಾಕ ತಾಲೂಕ ಅಧ್ಯಕ್ಷರಾದ ಅಜೀಜ ಮೊಕಾಶಿ, ಇಮ್ರಾನ ಡಾಂಗೆ, ಶಬ್ಬೀರ್ ಮುಲ್ಲಾ, ಬಾಳೇಶ್ ಪೂಜಾರಿ, ಅಜರ ಸನದಿ, ದುರ್ಗಪ್ಪ ಬಾಗಲಕೋಟ, ಮೋಶಿನ್ ಪೈಲವಾನ, ಮುಬಾರಕ ಬಾಳೆಕುಂದ್ರಿ, ತೌಸಿಫ್ ಬಾಲಪ್ರವೇಶ, ರಂಜಾನ್ ಮುಲ್ಲಾ ,ಸಂತೋಷ್ ಕಳವಿ, ಮೆಹಬೂಬ್ ತಲವಾರ, ಇರ್ಫಾನ್ ಮುಲ್ಲಾ, ಮೈನು ಅಂಡಗಿ, ಹಾಗೂ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.ವರದಿ:-ಚಂದ್ರು ತಳವಾರ


