ಶಿರಗಾಂವಿ:ಡ್ರೋಣ ಕ್ಯಾಮರಾ ಹೋಯ್ತು ನೀರಿನ ಬಾಟಲಿ ಬಂತು ಮೀಶೋ ಆ್ಯಪನ ಯಡವಟ್ಟು.
ಡೆಲಿವರಿ ಬಾಯ್ ಗೆ ಬಂತು ಕುತ್ತು. ಆರ್ಡರನಲ್ಲಿ ಡ್ರೋಣ ಕ್ಯಾಮರಾ ಆದರೆ ಬಂತು ನೀರಿನ ಬಾಟಲಿ, ಮಿಶ್ಯೋ ಆ್ಯಪನ ಮೋಸದ ಕರ್ಮಕಾಂಡ,ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಗಾಂವಿ ಗ್ರಾಮದಲ್ಲಿ ಶ್ರೀನಿವಾಸ ಸುರೇಶ ಮಜಕಟ್ಟಿ ಯುವಕನೊರ್ವ ೧೧೪೦/- ರೂಪಾಯಿ ಕಿಮ್ಮತ್ತಿನ ಡ್ರೋಣ ಕ್ಯಾಮರಾ ಆರ್ಡರ್ ಮಾಡಲಾಗಿತ್ತು ಆದರೆ ಆರ್ಡರ್ ಹಾಕಿದ ಮಿಶೊ ಆ್ಯಪನಲ್ಲಿ ರಟ್ಟಿನ ಡಬ್ಬಿಯಲ್ಲಿ ನೀರು ತುಂಬಿದ ಬಾಟಲಿಯನ್ನ ಹಾಕಿ ಯುವಕನೋರ್ವನಿಗೆ ಮೋಸ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇನ್ನೂ ಬಾಕ್ಸ ಬಿಚ್ಚುತ್ತಿದ್ದಂತೆ ನೀರಿನ ಬಾಟಲಿ ನೋಡಿ ಗ್ರಾಮದಲ್ಲಿನ ಸಾರ್ವಜನಿಕರು ಶಾಕ್ ಆಗಿದ್ದಾರೆ.ಹೀಗಾಗಿ ಡೆಲಿವರಿ ಬಾಯ್ ನನ್ನ ತರಾಟೆಗೆ ತೆಗೆದುಕೊಂಡು ಮರಳಿ ಕಳಿಸುವ ಹಾಗೇ ತಾಕಿತು ಮಾಡಿದ್ದಾರೆ.
ಸಾರ್ವಜನಿಕರು ಹೀಗೆ ಎಷ್ಟು ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಿಯಾ ಎಂದು ಡೆಲಿವರಿ ಬಾಯ್ ಸಮೀರ ನದಾಪ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಡ್ರೊಣ ಹೊಯ್ತು ನೀರ ಬಾಟಲಿ ಬಂತು ಮೀಶೋ ಆ್ಯಪನ ಯಡವಟ್ಟಿಗೆ ಬೇಸತ್ತ ಸಾರ್ವಜನಿಕರು.
ಇನ್ನೂ ಈ ಬಗ್ಗೆ ಹುಕ್ಕೇರಿ ಪೋಲಿಸರಿಗೆ ದೂರು ನೀಡಲು ಮುಂದಾಗಿದ್ದಾರೆ. ವರದಿ ಚಂದ್ರು ತಳವಾರ


