ಜೆಜೆಎಮ್ ಕಾಮಗಾರಿ ಖೆಡ್ಡಾಕೆ ತೋಡಿ.ರೊಕ್ಕಾ ರೂಪಾಯಿ ತಿಂದ ಮಂದಿನ ದಿಕ್ಕಪಾಲ ಮಾಡಿದ ಇಂಜಿನಿಯರ.!
ಹಳ್ಳ ಹಿಡಿದ ಜೋಡಟ್ಟಿ ಜಲಜೀವನ ಮಿಷನ್ ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಜೋಡಟ್ಟಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆ (JJM) ಕಾಮಗಾರಿಯಲ್ಲಿ ಬಾರಿ ಅವ್ಯವಹಾರ ಬೆಳಕಿಗೆ ಬಂದಿದೆ.

ಜಲ ಜೀವನ ಮಿಷನ್ (JJM) ಯೋಜನೆಯಲ್ಲಿ ಗುತ್ತಿಗೆದಾರರಿಂದ ಕಮೀಷನ್ ಹಣದ ವಿವರ ಒಂದು ಆವಾಂತರವಾದರೆ ಕಳಪೆ ಕಾಮಗಾರಿ ಹಳೆಯ ಪೈಪ್ ತೆಗೆದು ಹೊಸ ಟ್ಯಾಂಕರ್ ಗೆ ಜೋಡಿಸಿದಷ್ಟೇ ಅಲ್ಲದೆ ಹಳೆಯ ಪೈಪ್ಲೈನ್ ಗೆ ಕನ್ನೆಕ್ಷನ್ ಕೊಟ್ಟು ಹೊಸ ಪೈಪ್ಲೈನ್ ಮಾಡಿದ್ದೆವೆಂದು ಪೇಚಿಗೆ ಸಿಲುಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಹುತೇಕ 40% ಪರ್ಸೆಂಟೇಜ್ ಎಂಬ ಭೂತ ಇ ಕಳಪೆ ಕಾಮಗಾರಿಗಳಿಗೆ ಪ್ರಚೋದನೆ ನೀಡುತ್ತಿದ್ದು ಇನ್ನೂ ಬೇರೆ ಬೇರೆ ರೀತಿಯಲ್ಲಿ ಕಮಿಷನ್ ಯಾರಿಗೆಲ್ಲ ಸೇರಬೇಕು ಅವರಿಗೆಲ್ಲ ಸೇರಿದೆ.
ಈ ರೀತಿಯ ಕಮೀಷನ್ ವ್ಯವಹಾರ ಎಲ್ಲರಿಗೂ ಗೊತ್ತು,ಆದ್ರೆ ಪ್ರಶ್ನೆ ಮಾಡಲು ಯಾರು ಹೋಗೋದಿಲ್ಲ.
ಯಾಕೆಂದರೆ,ಮಲ ತಿಂದದ್ದು ಯಾರಿಗಾದರೂ ಹೇಳಿದರೆ ಏನು ಅಂದು ಕೊಳ್ಳುತ್ತಾರೆ ಅಲ್ವಾ.?
ಆದ್ದರಿಂದ ಸರಕಾರ ಈ ಕೂಡಲೇ ಗಮನಹರಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ. ವರದಿ:-ಚಂದ್ರು ತಳವಾರ ಟಿವಿ3 ನ್ಯೂಸ್ ರಾಯಬಾಗ


