ಗುರು ಸತೀಶ್ ಜಾರಕಿಹೊಳಿಯಂತೆ ಅಮಾವಾಸ್ಯೆಯ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಇರ್ಪಾನ್ ತಾಳಿಕೋಟೆ
ಖಾನಾಪುರ:ನಾಮ ಪತ್ರಿಕೆ ಶುರುವಾದಾಗಿನಿಂದಲೂ ಅಭ್ಯರ್ಥಿಗಳ ಭರಾಟೆ ಜೋರಾಗಿದ್ದು ಅಭ್ಯರ್ಥಿಗಳು ತಮ್ಮ ಸಾಮರ್ಥ್ಯ ತೋರಿಸುತ್ತಿದ್ದು ಜನಬೆಂಬಲ ತೋರಿಸಿ ನಾಮಪತ್ರ ಸಲ್ಲಿಸುತ್ತಿದ್ದು ಅದರಂತೆ ಕಾಂಗ್ರೆಸ್ ನಾಯಕರ ನಡೆಯಿಂದ ಬೇಸತ್ತ ಇರ್ಫಾನ್ ತಾಳಿಕೋಟೆ ನಾಮ ಪತ್ರ ಸಲ್ಲಿಕೆಯ ಕೊನೆಯ ದಿನದಂದು ತಮ್ಮ ರಾಜಕೀಯ ಗುರುವಾದ ಸತೀಶ್ ಜಾರಕಿಹೊಳಿಯವರಂತೆ ಅಮಾವಾಸ್ಯೆಯ ರಾಹುಕಾಲದಂದು ನಾಮ ಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು ಪಟ್ಟಣದ ಶಕ್ತಿದೇವಿ ಚೌರಾಶಿದೇವಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭವಾದ ರ್ಯಾಲಿಯಲ್ಲಿ ಉತ್ತರ ಕರ್ನಾಟಕ ವಿಶೇಷ ತಮಟೆ ತಂಡಗಳ ಜೊತೆ ನೂರಾರು ಕಾರ್ಯಕರ್ತರು ಹೆಜ್ಜೆ ಹಾಕಿ ತಹಶಿಲ್ದಾರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು
ಈ ವೇಳೆ ಮಾತನಾಡಿದ ಇರ್ಪಾನ್ ತಾಳಿಕೋಟೆ ನಾನು ಖಾನಾಪುರ ತಾಲೂಕನ್ನು ಸಿಂಗಾಪುರ ಮಾಡುವ ಕನಸು ಕಂಡಿದ್ದೇನೆ ಅದಕ್ಕಾಗಿ ಹಗಳಿರಳು ಜನಸೇವೆಯನ್ನೆ ಕಾಯಕ ಮಾಡಿಕೊಂಡಿದ್ದೇನೆ ನಾನು ಸರಳ ಸಜ್ಜನಿಕೆ ರಾಜಕಾರಣಿ ಸತೀಶ್ ಜಾರಗಿಹೊಳಿಯವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ ಆದ್ದರಿಂದ ಜನಸೇವೆಯೆ ನನ್ನ ದ್ಯೇಯ ಒಂದು ವೇಳೆ ನನ್ನ ಗೆಲುವಾದಲ್ಲಿ ಅದು ಜನಸಾಮಾನ್ಯನ ಗೆಲುವಾಗಲಿದೆ ನಾನು ದುಡ್ಡು ಮಾಡಲು ರಾಜಕೀಯಕ್ಕೆ ಬಂದವನಲ್ಲ ನನ್ನ ಹೆಸರಲ್ಲೇ ಕೋಟಿ ಇದೆ ನನಗೆ ಇನ್ಯಾವ ಕೋಟಿ ಬೇಕು ನನಗೆ ಜನರ ಆಶೀರ್ವಾದ ಸಾಕು ಎಂದರು
ಮಾತಿನುದ್ದಕ್ಕೂ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ದ ಹರಿಹಾಯ್ದ ಇರ್ಪಾನ್ ತಾಳಿಕೋಟೆ
ಈಗಿನ ಶಾಸಕರು ಆಗರ್ಭ ಶ್ರೀಮಂತರು ಹೀಗಾಗಿ ಅವರಿಗೆ ಬಡವನ ಬೆವರಿನ ಬೆಲೆ ಗೊತ್ತಿಲ್ಲ ಪಾಪ ಅವರು ಎದ್ದು ಮನೆಯಿಂದ ಆಚೆ ಬರುವದೆ ಹನ್ನೊಂದು ಘಂಟೆ ಆಗಾಗಲೇ ನಮ್ಮ ರೈತ ತನ್ನ ಜಮೀನಿನಲ್ಲಿ ಉಳುಮೆ ಮಾಡುತ್ತಿರುತ್ತಾನೆ ಈಗ ಚುನಾವಣೆ ಸಮಯದಲ್ಲಿ ಬೆಳಗ್ಗೆ ಏಳು ಘಂಟೆಗೆ ಎದ್ದು ಜನರ ಹತ್ತಿರ ಹೋಗುವವರಿಗೆ ಉಳಿದ ಜನ ಆ ಜನರ ಸಮಸ್ಯೆ ಆಲಿಸಲು ಸಮಯ ಇರಲಿಲ್ಲವೇ ಅಲ್ಲದೆ ನಾಮಪತ್ರ ಸಲ್ಲಿಸಲು ಬರುವಾಗ ತಹಶಿಲ್ದಾರ ಕಚೇರಿ ಎದುರುಗಡೆ ಇರುವ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡದಂತೆ ತಮ್ಮ ಪ್ರಭಾವ ಬಳಸಿ ಪೋಲಿಸ್ ವಾಹನ ಅಡ್ಡ ನಿಲ್ಲಿಸಿ ನಮಗೆ ತೊಂದರೆ ಕೊಡಲು ನೋಡಿದ್ದನ್ನ ಇಡೀ ಖಾನಾಪುರ ಮತದಾರರು ನೋಡಿದ್ದು ಇದಕ್ಕೆ ಮತಾದಾನದಲ್ಲಿ ತಕ್ಕ ಉತ್ತರ ನೀಡಲಿದ್ದಾರ
ಅಭಿವೃದ್ಧಿ ಎಂದರೆ ಬರೀ ಪೋಟೊ ತೆಗೆಸಿಕೊಳ್ಳುವದಲ್ಲ
ಅಭಿವೃದ್ಧಿ ಎಂದರೆ ಕೇವಲ ಪೋಟೊ ತೆಗೆಸಿ ಹಾಕುವುದಲ್ಲ ನಮ್ಮ ತಾಲ್ಲೂಕಿನ ರಸ್ತೆಗಳನ್ನ ನೋಡಿದರೆ ಎಂತವರಿಗೂ ತಾಲೂಕಿನ ಅಭಿವೃದ್ಧಿ ಬಗ್ಗೆ ಗೊತ್ತಾಗತ್ತೆ ಆಸ್ಪತ್ರೆ ನಿರ್ಮಾಣ ಮಾಡಿದಿನಿ ಅಂತ ಪೋಟೋ ಶೂಟ್ ಮಾಡಿ ಬಸ್ ನಿಲ್ದಾಣದ ಕಾಮಗಾರಿ ಕಳಪೆ ಆಗುತ್ತಿದೆ ಅಂತ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಬಂದರೂ ಕೆಲಸ ನಿಂತಿಲ್ಲ ಅಂದರೆ ಅದರ ಮೇಲೆ ಶಾಸಕರ ಕೃಪಾಕಟಾಷ್ಟ ಇರುವದು ಕಂಡುಬರತ್ತೆ ಎಂದು ಶಾಸಕಿ ಅಂಜಲಿ ಮೇಲೆ ಹರಿಹಾಯ್ದರು.


