ರಾಮನಗರ: ಅಪರಿಚಿತ ಶವ ಪತ್ತೆ,ಗುರುತು ಪತ್ತೆಯಾದಲ್ಲಿ ಸಂಪರ್ಕಿಸಿ.ಉತ್ತರ ಕನ್ನಡ ಜಿಲ್ಲೆ ರಾಮನಗರ ಪೋಲಿಸ್ ಠಾಣೆಯ ವ್ಯಾಪ್ತಿರಾಮನಗರ ದಿನಾಂಕ : 29-03-2023 ರಂದು ಫಿರ್ಯಾದಿ ಶ್ರೀ ಹನುಮಂತ ಯಲ್ಲಪ್ಪ ಸಪ್ತಸಾಗರೆ ಪ್ರಾಯ-38 ವರ್ಷ, ರೈಲ್ವೆ ಹೆಡ್ ಕಾನಸ್ಟೇಬಲ್ ಸಾ॥ ರೈಲ್ವೆ ಪೊಲೀಸ ಠಾಣೆ ಬೆಳಗಾವಿ ಹಾಲಿ: ರೈಲ್ವೆ ಹೊರ ಠಾಣೆ ಕ್ಯಾಸರಲಾಕ ತಾ|| ಜೋಯಿಡಾ (ಮೊ.ನಂ : 7625073541) ದೂರನ್ನು ಕೊಟ್ಟದ್ದು, ದೂರಿನಲ್ಲಿ ಮೃತ 50 ರಿಂದ 55 ರ ಪ್ರಾಯದ ಮೃತ ಅಪರಿಚಿತ ವ್ಯಕ್ತಿಯು ಎಲ್ಲಿಂದ ಬಂದವನು ತನಗಿದ್ದ ಯಾವುದೇ ಖಾಯಿಲೆಯಿಂದ ಅಥವಾ ಇತರೆ ಯಾವುದೇ ರೀತಿಯಲ್ಲಿ ದಿನಾಂಕ: 28-03-2023 ರಂದು 18-00 ಗಂಟೆಯಿಂದ ದಿನಾಂಕ: 29-03- 2023 ರಂದು 13-45 ಗಂಟೆಯ ನಡುವಿನ ಅವಧಿಯಲ್ಲಿ ಕ್ಯಾಸಲರಾಕ್ದ ರೈಲು ನಿಲ್ದಾಣದ ಹತ್ತಿರ ಕಣ್ಣನ ಕಡಿಗಳ ಮೇಲೆ ಮೃತ ಸ್ಥಿತಿಯಲ್ಲಿ ಸಿಕ್ಕಿದ್ದು, ಮೃನ ಮೈ ಮೇಲೆ ಪೆಟ್ಟು ವಗೈರೆ ಇರುವುದಿಲ್ಲಾ. ಆತನ ಸಾವಿನ ಬಗ್ಗೆ ನನಗೆ ಯಾವುದೇ ಸಂಶಯ ಕಂಡು ಬರುವದಿಲ್ಲಾ. ಮೃತನು ಬಿಳಿ ಮಿಶ್ರಿತ ಕಪ್ಪು ತಲೆ ಹಾಗೂ ಗಡ್ಡದ ಕೂದಲು ಹೊಂದಿದ್ದು, ಆಕಾಶ ಬಣ್ಣದ ಟಿ-ಶರ್ಟ, ಕಡುನೀಲಿ ಬಣ್ಣದ ಅಂಡರವಿಯರ್ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಮೂಗಿನ ಎಡಹೊಳೆಯ ಪಕ್ಕದಲ್ಲಿ ನರು ಹಾಗೂ ಎಡಗಣ್ಣಿನ ಹುಟ್ಟಿನ ಮೇಲೆ ಹಳೆಗಾಯದ ಕಲೆ ಇರುತ್ತದೆ ಅಂತಾ ಮುಂದಿನ ಕ್ರಮ ಕೈಗೊಳ್ಳುವ ಕುರಿತು ನೀಡಿದ ದೂರನ್ನು, ರಾಮನಗರ ಪೊಲೀಸ ಠಾಣೆ ಯು.ಡಿ.ಆರ. ನಂ 02/2023 ಕಲಂ 174 ಸಿ.ಆರ.ಪಿ.ಸಿ ನೇದಕ್ಕೆ ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೊಂಡಿದ್ದು ಇರುತ್ತದೆ.
ಮೃತನ ಚಹರೆ ಗುರುತುಗಳು:
1) ಹೆಸರು ವಿಳಾಸ: ತಿಳಿದು ಬಂದಿಲ್ಲಾ.
2) ಪ್ರಾಯ: ಸುಮಾರು 50 ರಿಂದ 55 ವರ್ಷ
3) ಎತ್ತರ: 5 ಅಡಿ 5 ಇಂಚು
4) ಮೈ ಬಣ್ಣ:- ಗೋದಿ ಮೈ ಬಣ್ಣ
5) ದಪ್ಪನೆಯ ಮೈಕಟ್ಟು
6) ಬಟ್ಟೆಗಳ ವಿವರ: ಆಕಾಶ ನೀಲಿ ಬಣ್ಣದ ಟಿ-ಶರ್ಟ, ಕಡು ನೀಲಿ ಬಣ್ಣದ ಅಂಡರವಿಯರ್ ಹಾಗೂ ಬೂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. 7) ಗುರುತುಗಳು : ಮೂಗಿನ ಎಡಹೊಳೆಯ ಭಾಗದಲ್ಲಿ ನರು ಹಾಗೂ ಎಡಗಣ್ಣಿನ ಹುಬ್ಬಿನ ಮೇಲೆ ಹಳೆಗಾಯದ ಕಲೆ
ಇರುತ್ತದೆ.
ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಯ ವಿಳಾಸ ಮತ್ತು ವಾರಸುದಾರರ ಪತ್ತೆಯಾದಲ್ಲಿ ರಾಮನಗರ ಪೊಲೀಸ ಠಾಣೆಗೆ ಸಂಪರ್ಕಿಸಲು ಕೋರಿದೆ.
ದೂರವಾಣಿ ಸಂಖ್ಯೆಗಳು:
ಪಿ.ಎಸ.ಐ ರಾಮನಗರ ಪೊಲೀಸ ಠಾಣೆ-08383-248133/9480805261 ಪೊಲೀಸ ವೃತ್ತ ನಿರೀಕ್ಷಕರ ಕಛೇರಿ-08383-272833 ಜಿಲ್ಲಾ ನಿಸ್ತಂತು ಕೇಂದ್ರ ಕಾರವಾರ-08382-225550
ಪಿ.ಎಸ್.ಐ(ತನಿಖೆ) ರಾಮನಗರ.ವರದಿ ಚಂದ್ರು ತಳವಾರ
ರಾಮನಗರ ಅಪರಿಚಿತ ಶವ ಪತ್ತೆ,ಗುರುತು ಪತ್ತೆಯಾದಲ್ಲಿ ಸಂಪರ್ಕಿಸಿ
Leave a comment
Leave a comment


