ಹುಕ್ಕೇರಿ: ಬಸ್ ಸಂಚಾರದಲ್ಲಿ ವಿಫಲ ರಾತ್ರಿ 8 ಗಂಟೆಯವರೆಗೆ ವಿದ್ಯಾರ್ಥಿಗಳಿಂದ ಪ್ರತಿಭಟನೆ ಹೌದು ಹುಕ್ಕೆರಿ ಸಮೀಪದ ಕ್ಯಾರಗುಡ್ಡ ಕಾಲೇಜ ಹತ್ತಿರ ಪರೀಕ್ಷೆ ಮುಗಿಸಿ ಬಂದ ಡಿಗ್ರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬಸ್ ಇಲ್ಲದೆ ರಾತ್ರಿ ಹೊತ್ತು ಕಾದು ಕುಳಿತು ಪ್ರತಿಭಟನೆಗೆ ಇಳಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಡಿಪೊ ಮ್ಯಾನೆಜರ್ ಅವ್ಯವಸ್ಥೆಯನ್ನ ಕಂಡು ವಿದ್ಯಾರ್ಥಿಗಳು ಬಸ್ ಸಂಚಾರ ಸ್ಥಗಿತಗೊಳಿಸಿ ರಸ್ತೆಗಿಳಿದು ಕೆಲಕಾಲ ಪ್ರತಿಭಟನೆ ಮಾಡಿದರು. ಇನ್ನೂ ವಿಷಯ ತಿಳಿದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿನಿಯರ ಪೋಷಕರು ಕಳವಳ ವ್ಯಕ್ತಪಡಿಸಿದರು.ಈ ವ್ಯವಸ್ಥೆ ಕಂಡು ನಮ್ಮ ಮಕ್ಕಳನ್ನ ಇಂತಹ ಗುಡ್ಡಗಾಳು ಪ್ರದೇಶದ ಶಾಲೆಗೆ ಪ್ರವೇಶ ಪಡೆಯುವದು ಬೇಡ ಎಂದು ತಮ್ಮ ಅನಿಸಿಕೆ ಹೇಳಿದರು.ನಂತರ ಪ್ರತಿಭಟನೆ ಜೋರಾದಂತೆ ಪೊಲಿಸ್ ಸಿಬ್ಬಂದಿ ಪ್ರತಿಭಟನೆ ಹಿಂದೆ ತೆಗೆದುಕೊಳ್ಳುವಂತೆ ಮನವಿ ಮಾಡಿದರು ಆದರೂ ವಿದ್ಯಾರ್ಥಿನಿಯರು ನಮ್ಮ ಮುಖ್ಯ ಸಮಸ್ಯೆಗಳನ್ನು ಬಗೆ ಹರೆಸಿ ನಿಮ್ಮಮಕ್ಕಳಿಗೆ ಈ ರೀತಿಯ ಸಮಸ್ಯೆ ಆದರೆ ಸುಮ್ಮನಿರ್ತಿರಾ ಎಂದು ೫೯ ವಿದ್ಯಾರ್ಥಿಗಳು ಪ್ರಶ್ನಿಸಿದರು ಅದಕ್ಕೆ ಉತ್ತರ ಕೊಡದ ಪ್ರಾಂಶುಪಾಲರು ಪೋಲಿಸರು ಡಿಪೊ ಮ್ಯಾನೆಜರ್ ಕೆಲಕಾಲ ದಿಗ್ಬ್ರಾಂತರಾದರು ನಂತರ ಮಾಜಿ ಸಂಸದ ರಮೇಶ ಕತ್ತಿ ವಿದ್ಯಾರ್ಥಿನಿಯೊರ್ವಳಿಗೆ ಕರೆ ಮಾಡಿ ಪ್ರತಿಭಟನೆ ಮಾಡಬೇಡಿ ಹಿಂದೆ ತೆಗೆದುಕೊಳ್ಳಿ ಸಾರ್ವಜನಿಕರಿಗೆ ಸಮಸ್ಯೆ ಮಾಡಬೇಡಿ ಎಂದರು ವಿದ್ಯಾರ್ಥಿನಿಯರೆಲ್ಲ ರಮೇಶ ಕತ್ತಿಯವರಿಗೆ ಕರೆಯಲ್ಲಿ ತರಾಟೆ ತೆಗೆದುಕೊಂಡರು ನಾವು ಹಿಂದೆ ತಗೊಳ್ತಿವಿ ಆದರೆ ಮಾಧ್ಯಮದವರು ಪ್ರಶ್ನೆ ಮಾಡ್ತಾ ಇದ್ದಾರೆ ಸರ್ ಎಂದು ಹೇಳಿದಾಗ ಅವರನ್ನೆನು ಮಾಡ್ತಿರಿ ನೀವು ಹೋಗಿ ಎಂದು ಉದ್ದಟತನದ ಮಾತನಾಡಿ ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸದೆ ಬರೇ ತಾಲೂಕಿನಲ್ಲಿ ಇಂತಹದ್ದೆ ರಾಮಾಯಣೀ ಕೇಳುವದೇ ಆಗಿದೆ ನಂತರ ಡಿಪೊ ಮ್ಯಾನೆಜರ ಗೇ ಹೇಳಿ ಮತ್ತೊಂದು ಬಸ್ ಬಿಟ್ಟು ವಿದ್ಯಾರ್ಥಿನಿಯರನ್ನೆಲ್ಲ ತಮ್ಮ ಗ್ರಾಮಗಳಿಗೆ ಹೋಗಿ ಬಿಟ್ಟು ಬರುವಂತೆ ಮಾಧ್ಯಮದ ಸ್ನೇಹಿತರು ಸಹಾಯ ಮಾಡಿದರು.ಈ ಪ್ರತಿಭಟನೆ ಸಂದರ್ಭದಲ್ಲಿ ಒರ್ವ ವಿದ್ಯಾರ್ಥಿನಿ ಅಸ್ವಸ್ತಗೊಂಡು ಕೆಲ ಕಾಲ ಸ್ಥಿತಿ ಚಿಂತಾಜನಕವಾಗಿತ್ತು.ವರದಿ:-ಚಂದ್ರು ತಳವಾರ


