ಬೆಳಗಾವಿ: ರಾಯಬಾಗ ಮೀಸಲು ವಿಧಾನಸಭಾ ಮತ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆಗೆ ಸಿದ್ದಾರ್ಥ್ ವಾಡೆನ್ನವರ್ ಹೆಸರು ಮುಂಚೂಣಿಯಲ್ಲಿದೆ! ಕರ್ನಾಟಕ ಪಾಲಿಟಿಕ್ಸ್ ಪೀಪಲ್ ಚಾಣಕ್ಯ ಸೇರಿದಂತೆ ಹಲವಾರು ಪುಸ್ತಕ, ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ಸಿದ್ದಾರ್ಥ್ ವಾಡಿನವರು ಈಗಾಗಲೇ ನಾಡಿನ ಜನತಾ ಚಿರಪರಿಚಿತರಾಗಿದ್ದಾರೆ. ಮತ್ತು ಕಟ್ಟ ಹಿಂದುತ್ವವಾದಿಯಾಗಿರುವ ಸಿದ್ದಾರ್ಥ್ ವಾಡೆನ್ನವರ್ ರಾಯಬಾಗ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆಗೆ ಭಾರಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ರಾಯಬಾಗ ಮತಕ್ಷೇತ್ರದಲ್ಲಿ ದುರ್ಯೋಧನ ಐಹೊಳೆ ಅವರು ಕಣದಲ್ಲಿದ್ದಾರೆ. ಇದೀಗ ಅವರನ್ನು ಕಣದಿಂದ ಹಿಂದಕ್ಕೆ ಸರಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಸಿದ್ಧಾರ್ಥವಾಡೆನವರ್ ಹೆಸರು ಬಿಜೆಪಿ ಕೋರ್ ಕಮಿಟಿಯಲ್ಲಿ ಭಾರಿ ಚರ್ಚೆ ಆಗುತ್ತಿರುವದು ವಿಶೇಷವಾಗಿದೆ.ವರದಿ:-ಚಂದ್ರು ತಳವಾರ


