ಜೋಡಟ್ಟಿ:-ಕುಡಿಯುವ ನೀರಿನ ಟ್ಯಾಂಕಗೂ ಕಣ್ಣ ಹಾಕಿದ ಬೆಂಡವಾಡ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಇಂಜಿನಿಯರ ರಾಯಬಾಗ ವ್ಯಾಪ್ತಿಯಲ್ಲಿ ಬರುವ ಜೋಡಟ್ಟಿ ಗ್ರಾಮದಲ್ಲಿ ಜಲಜೀವನ ಮಿಷನ್ ಕಾಮಗಾರಿಯ ಇಂಜಿನಿಯರ್ ಮತ್ತು ಗುತ್ತಿಗೆದಾರನ ಕರಾಮತ್ತಿನಿಂದ ಗ್ರಾಮದಲ್ಲಿ ಹಳೆ ಪೈಪ್ಲೈನ್ ಗೆ ಕನೆಕ್ಷನ್ ಕೊಟ್ಟು ಹಳೆ ಟ್ಯಾಂಕಿನ ಪೈಪಗಳನ್ನು ಹೊಸ ಟ್ಯಾಂಕಿಗೆ ಜೋಡಿಸಿ ಸರ್ಕಾರಕ್ಕೆ ಮತ್ತು ಜೋಡಟ್ಟಿಯ ಜನರಿಗೆ ಪುಸಲಾಯಿಸಿ ಬಿಲ್ ತೆಗೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ಬೇಲಿಯೇ ಎದ್ದು ಹೊಲ ಮೇದಂತೆ ಅಲ್ಲಿನ ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕೆಲವು ಚೇಳಾಗಳ ಮೂಲಕ ದೇವಸ್ಥಾನಕ್ಕೆ ದುಡ್ಡು ಉಳಿಯಲಿ ಎಂದು ದೇವರ ಹೆಸರಿನಲ್ಲಿ ಗುತ್ತಿಗೆದಾರ ಮತ್ತು ಅಲ್ಲಿನ ಕೆಲವು ಸದಸ್ಯರ ಮಧ್ಯದಲ್ಲಿ ಸರ್ಕಾರದ ದುಡ್ಡನ್ನು ಲೂಟಿ ಹೊಡೆಯಲು ಸೆಟಲ್ಮೆಂಟ್ ಆಗಿದೆ ಎಂದು ಅಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಜಲಜೀವನ ಮಿಷನ್ ಕೆಲವು ಭ್ರಷ್ಟ ಅಧಿಕಾರಿಗಳು ಹಾಗೂ ದುಷ್ಟ ರಾಜಕಾರಣಿಗಳ ಹಾಗೂ ಸ್ಥಳಿಯ ಶಾಸಕರ ಪರ್ಶಂಟೆಜ ಕುಮ್ಮಕ್ಕಿಗೆ ಸಿಲುಕಿ (MLA) ಕೈಯಲ್ಲಿ ಸಿಕ್ಕು ಜಲಜೀವನ ಮಿಷನ್ ಪಕ್ಕ ಹದಿಗೆಟ್ಟು ಹೋಗಿದೆ. ಆದ್ದರಿಂದ ಸರ್ಕಾರ ಮತ್ತು ಮೇಲಾಧಿಕಾರಿಗಳು ತಕ್ಷಣ ಎಚ್ಚೆತ್ತು ಈ ತಪ್ಪಿತಸ್ಥರನ್ನು ಚೆಕ್ ಮೇಟ್ ಹಾಕಿ ಕಾನೂನಿನ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರ ಮನವಿಯಾಗಿದೆ.ಇನ್ನೂ ಇಂತಹ ಶಾಸಕರ ದುರಾಡಳಿತಕ್ಕೆ ರಾಯಬಾಗ ಮತಕ್ಷೇತ್ರದ ಜನರು ಕಂಗಾಲಾಗಿದ್ದಾರೆ.ಇನ್ನೂ ಬರುವ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಜನ ತಿರ್ಮಾನಿಸ ಬೇಕಾಗಿದೆ ಇಲ್ಲವಾದಲ್ಲಿ ಕ್ಷೇತ್ರ ಅಭಿವ್ರದ್ದಿಗೆ ಭಾರಿ ಪೆಟ್ಟು ಬೀಳಲಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರದಿ- ಚಂದ್ರು ತಳವಾರ


