ಮಾನ್ಯ ಅಬಕಾರಿ ಅಪರ ಆಯುಕ್ತರು (ಅಪರಾಧ) ಕೇಂದ್ರಸ್ಥಾನ ಬೆಳಗಾವಿ ಹಾಗೂ ಜಂಟಿ ಆಯುಕ್ತರು ಬೆಳಗಾವಿ ವಿಭಾಗ, ಅಬಕಾರಿ ಉಪ ಆಯುಕ್ತರು, ಬೆಳಗಾವಿ ಉತ್ತರ ಜಿಲ್ಲೆ ಮತ್ತು ಅಬಕಾರಿ ಉಪ ಅಧೀಕ್ಷಕರು, ಚಿಕ್ಕೋಡಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ
ವಿಧಾನಸಭೆಯ ಚುನಾವಣೆ ಹಿನ್ನಲೆಯಲ್ಲಿ ದಿನಾಂಕ 26.03.2023 ರಂದು ಸಾಯಂಕಾಲ 4:30 ಗಂಟೆಯ ಸಮಯದಲ್ಲಿ
ಬೆಳಗಾವಿ (ಉತ್ತರ) ಜಿಲ್ಲೆಯ ಹುಕ್ಕೇರಿ ವಲಯ ವ್ಯಾಪ್ತಿಯ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿರುವ ಬುಗುಟೆ ಆಲೂರ ತನಿಖಾ ಠಾಣೆಯಲ್ಲಿ ಕರ್ನಾಟಕ ರಾಜ್ಯದ Transit ಪರ್ಮಿಟ್ ಗಳನ್ನು ಪಡೆಯದೆ ಕೇವಲ ರಾಜಸ್ತಾನ ಹಾಗೂ ಗೋವಾ ರಾಜ್ಯದ ದಾಖಲಾತಿಗಳನ್ನು ಹೊಂದಿರುವ ಅಕ್ರಮವಾಗಿ ಕರ್ನಾಟಕ ರಾಜ್ಯವನ್ನು ಪ್ರವೇಶಿಸಿ
ಮಹಿಂದ್ರಾ ಪಿಕಪ್ ವಾಹನ ನೋಂದಣಿ ಸಂಖ್ಯೆ ಕೆಎ *01ಎಎಂ 8938*ರಲ್ಲಿ ಸಾಗಾಣಿಕೆಯಾಗುತ್ತಿದ್ದ
50 ಬಾಕ್ಸ್ (450ಲೀಟರ್) Paul gohn brilliance single malt ವಿಸ್ಕಿಯ* ಗೋವಾ ಮದ್ಯವನ್ನು ಜಪ್ತಿ ಮಾಡಿ ಚಾಲಕನಾದ ಧರ್ಮೇಂದ್ರ ಜಹಾಂಗೀರ ಹಾಗೂ ವಾಹನದ ಮಾಲೀಕನ ವಿರುದ್ಧ ಅಬಕಾರಿ ನಿರೀಕ್ಷಕರು ಹುಕ್ಕೇರಿ ವಲಯರವರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ವಾಹನದ ಮೌಲ್ಯ 7 ಲಕ್ಷ ಹಾಗೂ ಮದ್ಯದ ಮೌಲ್ಯ ರೂ.33 ಲಕ್ಷ ರೂಪಾಯಿಗಳು ಆಗಿದ್ದು ಹೀಗೆ ಪ್ರಕರಣದಲ್ಲಿ ಜಪ್ತುಪಡಿಸಿದ ಮುದ್ದೆಮಾಲಿನ ಒಟ್ಟು ಮೌಲ್ಯ 40 ಲಕ್ಷರೂಪಾಯಿ ಅಂದಾಜು ಆಗಿದೆ. ಅಬಕಾರಿ ನೀರಕ್ಷಕರು ಹುಕ್ಕೇರಿ ವಲಯ ವಿಜಯ ಕುಮಾರ ಮೇಳವಂಕಿ ಇವರ ನೇತೃತ್ವದಲ್ಲಿ ಕಾರ್ಯಾಚರಣೆ.
ವರದಿ. ಕಲ್ಲಪ್ಪಾ ಮಾಳಾ ಜ


