ನೂತನ ಹೈಟೆಕ್ ಪೊಲೀಸ್ ಠಾಣೆ ಉದ್ಘಾಟಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ.ಬೆಳಗಾವಿ ಜಿಲ್ಲೆ ಹುಕ್ಕೆರಿ ತಾಲೂಕಿನ ಯಮಕನಮರಡಿ ಪಠ್ಠಣದಲ್ಲಿ ಬಹುದಿನಗಳಿಂದ ಯಮಕನಮರಡಿ ಪೊಲಿಸ್ ಠಾಣೆ ಮಳೆಗಾಲ ಪ್ರಾರಂಬವಾಯಿತೆಂದರೆ ಕೊಡೆ ಹಿಡಿದುಕೊಂಡು ದೂರು ಸ್ವೀಕರಿಸಿದ ಘಟನೆಗಳನ್ನ ನಾವು ನೊಡಿದ್ದೆವೆ ಮೆಲ್ಛಾವಣಿ ಸೊರುತ್ತಿತ್ತು ಆದರೆ ಅಂತೂ ಇಂತೂ ನೂತನ ಪೊಲಿಸ್ ಠಾಣೆ ಕಟ್ಟಡ ಯಮಕನಮರಡಿ ಪೊಲಿಸರಿಗೆ ಹರುಷ ತಂದಿದೆ. ನೂತನ ಠಾಣೆ ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ರಾಜಕಿಯ ವ್ಯಕ್ತಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಠಾಣೆಯಲ್ಲಿ ಅಧಿಕಾರಿಗಳ ಕೊಠಡಿಗಳು, ಸ್ವಾಗತಕಾರರ
ಕೊಠಡಿ, ಕಂಪ್ಯೂಟರ್ ರೂಂ, ದಾಖಲೆ ಕೊಠಡಿ, ವಿಶ್ರಾಂತಿ ಕೊಠಡಿ ಮತ್ತು ವಿಚಾರಣಾಧೀನ
ಪುರುಷ ಮತ್ತು ಮಹಿಳಾ ಕೈದಿಗಳ ಕೊಠಡಿಗಳಿವೆ ಎಂದು ಎಸ್ಪಿ ಸಂಜೀವ ಪಾಟೀಲ ಭಾಷಣದಲ್ಲಿ ವಿವರಿಸಿದರು.
ಕಾರ್ಯಕ್ರಮ ಸೇರಿದಂತೆ ಜಿಲ್ಲಾಪೊಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಸಂಜೀವ ಪಾಟೀಲ ಎಡಿಶನಲ್ ಎಸ್ಪಿ ವೇಣುಗೋಪಾಲ ಗೊಕಾಕ ಡಿಎಸ್ ಪಿ ಮುಲ್ಲಾ ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ ಹುಕ್ಕೇರಿ ಪೊಲೀಸ್ ಠಾಣೆಯ ಸಿಪಿಐ ಮಹಮ್ಮದ ರಫಿಕ ತಹಸೀಲ್ದಾರ ಸಂಕೇಶ್ವರ ಠಾಣೆಯ ಸಿಪಿಐ ಪ್ರಲ್ಹಾದ ಚೆನ್ನಗಿರಿ ಪಿಎಸ್ಐ ಅಧಿಕಾರಿಗಳು ಸೇರಿದಂತೆ ಪೊಲಿಸ್ ಸಿಬ್ಬಂದಿ, ಕುಟುಂಬದ ಸದಸ್ಯರು, ಸಾರ್ವಜನಿಕರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.ವರದಿ ಬ್ರಹ್ಮಾನಂದ ಪತ್ತಾರ.


