Instagram Love Story: ಇನ್ ಸ್ಟಾಗ್ರಾಮಲ್ಲಿ ಪ್ರೀತಿ ಪ್ರೇಮ ಅಂತ ಹೇಳಿ, ಮದುವೆ ಆಗುವುದಾಗಿ ನಂಬಿಸಿ, ಗರ್ಭಿಣಿ ಮಾಡಿ ಕೈ ಕೊಟ್ಟ ಭೂಪ!
ಇತ್ತೀಚಿಗೆ ಸೋಷಿಯಲ್ ಮೀಡಿಯಾ ಲವ್ ಸ್ಟೋರಿಗಳು ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಪರಿಚಯ ಆಗೋದು, ನಂತರ ಲವ್, ಮದುವೆ, ದೋಖಾ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಹಾಗೆ ಇಲ್ಲಿಯು ಕುಡ ಅಂಥದ್ದೇ ಘಟನೆ ನಡೆದಿದೆ.
ಬಳ್ಳಾರಿ ಮೂಲದ ಅಣು ಎಂಬ ಯುವತಿಯನ್ನು ಇನ್ ಸ್ಟಾಗ್ರಾಮದಲ್ಲಿ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ, ಗರ್ಭಿಣಿ ಮಾಡಿ ಕೈ ಬಿಟ್ಟ ಪ್ರಕರಣ ಒಂದು ತಡವಾಗಿ ಬೆಳಕಿಗೆ ಬಂದಿದೆ.
ಹೌದು ವೀಕ್ಷಕರೇ, ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಮರಡಿ ಶಿವಾಪುರ ಗ್ರಾಮದ ಲಗಮಣ್ಣ ದಳವಾಯಿ ಈತನೇ ಈ ಕೃತ್ಯ ಎಸಿಗಿದ್ದಾನೆ. ಬಳ್ಳಾರಿ ಮೂಲದ ಅಣು ಎಂಬ ಯುವತಿಯನ್ನು ಪುಸಲಾಯಿಸಿ, ತನ್ನ ಕಾಮದಾಹ ತೀರಿಸಿಕೊಳ್ಳುವುದಕ್ಕೋಸ್ಕರ, ಯುವತಿಯನ್ನು ಮದುವೆ ಆಗುವುದಾಗಿ ಆಮೀಶ ವಡ್ಡಿ, ನಯವಾಗಿ ವಂಚಿಸಿ, ಗೋಕಾಕಿನ ಖಾಸಗಿ ಲಾಡ್ಜ್ ಒಂದಕ್ಕೆ ಕರೆಸಿ, ಹಲವಾರು ಬಾರಿ, ಲವ್ ಸೆಕ್ಸ್ ದೋಖಾ ಮಾಡಿ, ಇದೀಗ ಯುವತಿಯನ್ನು, ಮದುವೆ ಆಗುವದಕ್ಕೆ, ನಿರಾಕರಿಸಿದ್ದಾನೆ. ಯುವತಿಗೆ, ನೀನು ಕೆಳ ಜಾತಿಯವಳು, ನನ್ನ ಜಾತಿಯವಳು ಅಲ್ಲವೆಂದು, ಜಾತಿಯೆಂಬ ವಿಷಭೀಜ ಹರಡಿದ್ದಾನೆ.
ಯುವತಿ ಮದುವೆ ಮಾಡಿಕೊ ಅಂತ ಅಂಗಲಾಚಿ ಬೇಡಿದರು, ಕೇಳದ ಲಗಮಣ್ಣ ದಳವಾಯಿ. ತನ್ನ ಸ್ನೇಹಿತರ ಕಡೆಯಿಂದ ಅಣು ಗೆ, ಮನಬಂದಂತೆ ತಳಿಸಿದ್ದಾನೆ. ಮದುವೆಗೆ ಯುವತಿ ಪಟ್ಟು ಬಿಡದಾಗ, ಲಗಮಣ್ಣ ದಳವಾಯಿ ಜೈಲಿಗೆ ಹೋಗುವುದಕ್ಕೂ ಸೈ… ಜೈಲಿನಲ್ಲಿ ಸಾಯೋತನ ಕೊಳೆಯುವುದಕ್ಕೆ ಸೈ ಎಂದು ಬೊಗಳೆ ಬಿಟ್ಟಿದ್ದಾನೆ. ಮದುವೆ ಆಗೋದಿಲ್ಲ ಏನು ಮಾಡುತ್ತಿಯೋ ಮಾಡು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ ಲಗಮಣ್ಣನ ಮೇಲೆ ಜಾತಿ ನಿಂದನೆ ಪ್ರಕರಣ ಕೂಡ ದಾಖಲಾಗಿದೆ.
ಇದೀಗ ನ್ಯಾಯ ಕೇಳಿ ಬಂದ ಯುವತಿಯನ್ನು, ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅನು ಎಂಬ ಯುವತಿ,ಜಾರಿ ನಿರ್ದೇಶನಾಲಯದ sp ಗಡಾಡದಿ ಅವರನ್ನು ಭೇಟಿ ಮಾಡಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಅದೇ ರೀತಿ ಮಾನ್ಯ ವರಿಷ್ಠ ಅಧಿಕಾರಿಗಳು, ಆರೋಪಿಗಳನ್ನು ಬಂಧಿಸಿ, ಯುವತಿಗೆ ನ್ಯಾಯ ಕೊಡಿಸುವ ಭರವಸೆ ಕುಡಾ ನೀಡಿದ್ದಾರೆ.
ವರದಿ:- ಚಂದ್ರು ತಳವಾರ್ ಟಿವಿ3 ನ್ಯೂಸ್ ಕನ್ನಡ ಬೆಳಗಾವಿ