ಚಿಕ್ಕೋಡಿ: ಟಿಪಿ ಪಾಟೀಲ ಕೊಲೆಗೆ ಪ್ರಯತ್ನ, ಆರೋಪಿ A1 ಬಂಧಿಸಿ, A2 ವೀರಭದ್ರಯ್ಯ ಮಾಸ್ತರ ಹಾಗೂ A3 ರಾಜಶ್ರೀಯನ್ನ ಕೈ ಬಿಟ್ಟ ಚಿಕ್ಕೋಡಿ ಪೊಲೀಸರು
ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಕಳೆದ 10 ದಿನಗಳ ಹಿಂದಷ್ಟೇ ಬರ್ಬರವಾಗಿ ಹಲ್ಲೆ ಗೊಳಗದ ಮಾಜಿ ತಾಲೂಕು ಪಂಚಾಯತ ಸದಸ್ಯ ರಾಜು ಪಾಟೀಲನನ್ನ ಕೊಲೆಗೆ ಸಂಚು ಮಾಡಿದ್ದ ಮುಗಳಿ ಗ್ರಾಮದ ವೀರಭದ್ರಯ್ಯ ಗೊಟೂರೆ, ಪಂಚಾಕ್ಷರಿ ಗೊಟೂರೆ, ರಾಜಶ್ರೀ ಗೊಟುರೆ ಇವರೆಲ್ಲರೂ ಕೂಡಿ ರಾಜು ಪಾಟೀಲ ನನ್ನ ಮಚ್ಚು ಲಾಂಗ ರಾಡ್ ಹೀಗೆ ಅನೇಕ ವೆಪನ್ಸ್ ಗಳ ಮೂಲಕ ಮಾರನಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿತ್ತು.
ಆದರೆ ಪ್ರಕರಣ ದಾಖಲಿಸಿಕೊಂಡ ಚಿಕ್ಕೋಡಿ ಪೊಲೀಸರು ಬಿಏನ್ಎಸ್ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿಕೊಂಡು ಆರೋಪಿಗಳ ಬಂದನಕ್ಕೆ ಮುಂದಾಗದೆ ಚಿಕ್ಕೋಡಿ ಪೊಲೀಸರು ಮೂಲ ಆರೋಪಿ ಮಾಸ್ತರ ಈರಯ್ಯ ನನ್ನ ಬಂದಿಸದೆ ಇರುವದು ಪ್ರಕರಣದಲ್ಲಿ ಅನೇಕ ಸಂಶಯಕ್ಕೆ ಕಾರಣವಾಗುತ್ತಿದೆ.
ಇನ್ನು ಈ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನ ಜೈಲಿಗಟ್ಟಬೇಕಿದ್ದ ಚಿಕ್ಕೋಡಿ ಪೊಲೀಸರು ಓರ್ವನನ್ನೇ ಅರೆಸ್ಟ್ ಮಾಡಿ A2 ಆರೋಪಿ ಮಾಸ್ತರ ನನ್ನ ಸೇವ್ ಮಾಡಿ ಕಾನೂನಿನ ಚೌಕಟ್ಟಿನಿಂದ ಹೊರಗಡೆ ಇಡುತ್ತಿದ್ದು ಪೊಲೀಸರ ಮೇಲೆ ಅನೇಕ ಆರೋಪಗಳು ಕೇಳಿ ಬರುತ್ತಿವೆ.
ಪೊಲೀಸರ ಮೇಲೆ ಸಂಶಯಸ್ಪದವೆ ಗ್ರಾಮದಲ್ಲಿ ವಾತಾವರಣ ಮೂಡಿದೆ. ಇನ್ನು ಈ ಪ್ರಕರಣದಲ್ಲಿ ಮೊದಲಿಗೆ ಮಚ್ಚಿನಿಂದ ಹೊಡೆದು ಗಾಯ ಪಡಿಸಿದವ ಈರಯ್ಯ ನಂತರ ಪಂಚಯ್ಯಾ ರಾಜಶ್ರೀ ಎಂದು ಮಧ್ಯಮದ ಮುಂದೆ ಗಾಯಗೊಂಡ ಟಿಪಿ ಸದಸ್ಯ ರಾಜು ಪಾಟೀಲ ಹೇಳಿಕೆ ನೀಡಿದ್ದಾರೆ.
ಇಷ್ಟೆಲ್ಲಾ ಮಾಹಿತಿ ಇದ್ದರು ಚಿಕ್ಕೋಡಿ ಪೊಲೀಸರು ಆರೋಪಿಗಳು ಕಣ್ಣ ಮುಂದೆ ತಿರುಗಾಡುತ್ತಿದ್ದರು ಬಂದಿಸದೆ ಇರುವದು ಬಹುಷಃ ಕಾಂಚನಮ್ ಕಾರ್ಯ ಸಿದ್ದಿ ಎಂಬಂತೆ ಸಂಶೆಗೆ ಎಡೆ ಮಾಡಿ ಕೊಡುತ್ತಿದೆ. ಇನ್ನು ಪ್ರಕರಣದ ಕುರಿತು ಚಿಕ್ಕೋಡಿ ಸಿಪಿಐ ಎಫ್ ಐ ಆರ್ ಮೂಲಕ ಅರ್ಜಿ ಸಮೇತ ಶಿಕ್ಷಣ ಇಲಾಖೆಗೆ ಮಾಹಿತಿ ಕೊಟ್ಟು ಮುಂದಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಇನ್ನು BEO ಈ ಪ್ರಕರಣದ ಕುರಿತು ಹೆಚ್ಚಿನ ಕ್ರಮ ಕೈಗೊಳ್ಳಲು ಡಿಡಿಪಿಐ ಗೆ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ ಪೊಲೀಸರು ಆರೋಪಿಗಳನ್ನು ಜೈಲಿಗಟ್ಟಿ ಇಂತಹ ಪ್ರಕರಣ ಮತ್ತೊಮ್ಮೆ ಮಗದೊಮ್ಮೆ ಈ ಗ್ರಾಮದಲ್ಲಿ ಶಾಂತಿ ವಾತಾವರಣ ಮೂಡಲು ಪೊಲೀಸರು ಆರೋಪಿಗಳನ್ನ ತತಕ್ಷಣ ಬಂಧಿಸಬೇಕಿದೆ.
ಇಲ್ಲವಾದಲ್ಲಿ ಹಲವು ಸಂಘಟನೆಗಳ ಮೂಲಕ ಜಿಲ್ಲಾ ಪೋಲಿಸ ಕಚೇರಿ ಮುಂದೆ ಉಗ್ರ ಹೋರಾಟ ಮಾಡುವದಾಗಿ ಅನೇಕ ಸಮಾಜ ಸೇವಕರು ಹಾಗೂ ಸಂಘಟನೆ ಅಧ್ಯಕ್ಷರ ಹಾಗೂ ಹಿರಿಯ ಪತ್ರಕರ್ತರು ಗಂಬಿರವಾಗಿ ಆಕ್ರೋಶವ್ಯಕ್ತ ಪಡಿಸಿದ್ದಾರೆ.
ಇನ್ನು ಪ್ರಕರಣದ ಕುರಿತು ಪೊಲೀಸರ ವಿರುದ್ದ ಮಾಜಿ ತಾಲೂಕು ಪಂಚಾಯತ ಸದಸ್ಯ ರಾಜು ಪಾಟೀಲ ಅಸಮಾಧಾನ ಹೊರಹಾಕಿದ್ದಾರೆ, ರಾಜಕೀಯ ವ್ಯಕ್ತಿಯಾದ ನನಗೆ ಪ್ರಕರಣದಲ್ಲಿ ಆರೋಪಿಗಳನ್ನ ಬಂದಿಸದೆ ಇರುವದು ಸಾಮಾನ್ಯ ವ್ಯಕ್ತಿಗಳ ಕಥೆ ಹೇಗಾಗಬಾರದೆಂದು ಮಾಧ್ಯಮದ ಮುಂದೆ ಕಿಡಿಕಾರಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ