ಖಾನಾಪುರ: ಕರಿಕಟ್ಟಿ ಗ್ರಾಮದಲ್ಲಿ ನವೀಕೃತ ವಿಠ್ಠಲ್ ರುಕ್ಮಿಣಿ ಮಂದಿರ ಲೋಕಾರ್ಪಣೆ ಮಾಡಿದ ದೇವಸ್ಥಾನಗಳ ಜಿರ್ನೋಧಾರಕ ನಾಸೀರ್ ಬಾಗವಾನ
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕರಿಕಟ್ಟಿ ಗ್ರಾಮವು ಭಕ್ತಿ ಮತ್ತು ಸೌಹಾರ್ದತೆಯ ಸಂಗಮಕ್ಕೆ ಸಾಕ್ಷಿಯಾಯಿತು. ಇಲ್ಲಿ ನಾಸೀರ್ ಭಾಗವಾನ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಜೀರ್ಣೋದ್ಧಾರಗೊಳಿಸಿದ ಸುಂದರವಾದ ವಿಠ್ಠಲ್ ರುಕ್ಮಿಣಿ ಮಂದಿರವು ರವಿವಾರ 11/5/25ರಂದು ವಿಜೃಂಭಣೆಯಿಂದ ಲೋಕಾರ್ಪಣೆಗೊಂಡಿತು.
ಜನಸೇವೆ ಜನಾರ್ದನ ಸೇವೆ ಎಂಬ ಉದಾತ್ತ ಧೈಯವನ್ನು ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದಿರುವ ನಾಸೀರ್ ಭಾಗವಾನ ಅವರು, ಕಳೆದ ಹಲವು ವರ್ಷಗಳಿಂದ ಯಾವುದೇ ಸ್ವಾರ್ಥವಿಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಜಿಲ್ಲೆಯ ಖಾನಾಪುರ ತಾಲೂಕಿನಾದ್ಯಂತ ಅವರು ನೂರಾರು ದೇವಾಲಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ರಾಜಕೀಯ ಜೀವನದಲ್ಲಿ ಹಿನ್ನಡೆ ಅನುಭವಿಸಿದರೂ, ಅವರ ಸೇವಾ ಮನೋಭಾವ ಕುಂದಿಲ್ಲ,
ತಾಲೂಕಿನಾದ್ಯಂತ ಅವರಿಗೆ ಅಪಾರ ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ.
ಕರಿಕಟ್ಟಿ ಗ್ರಾಮದ ವಿಠ್ಠಲ್ ರುಕ್ಮಿಣಿ ಮಂದಿರವು ನಾಸೀರ್ ಭಾಗವಾನ ಅವರ ಸೇವಾ ಕೈಕಾರ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಅವರು ಶ್ರದ್ದೆಯಿಂದ ನವೀಕರಿಸಿದ ಈ ಮಂದಿರದ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು.
ಈ ಪವಿತ್ರ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದ ವಿಶ್ವಭಕ್ತಿ ವೇದಿಕೆ ಆಯೋಜಕರಾದ ಬಾಳಗಿರಿ ಮಹಾರಾಜ್ , ದೇಮಪ್ಪ ವಡ್ಡರ ,ವಸಂತ್ ತಿಪ್ಪಣ್ಣವರ, ಮುಕುಂದ್ ಮಹಾರಾಜ್ ಹಾಗೂ ಕರಿಕಟ್ಟಿ ಗ್ರಾಮದ ಹಿರಿಯರು ಮತ್ತು ಅಪಾರ ಸಂಖ್ಯೆಯ ಸಾಧು ಸಂತರು ಗ್ರಾಮಸ್ಥರು ಸಾಕ್ಷಿಯಾದರು. ಈ ಸಂದರ್ಭವು ಗ್ರಾಮದಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿತ್ತು.
*ವಿಶ್ವಭಕ್ತಿ ವೇದಿಕೆ ಆಯೋಜಕರಾದ ಬಾಳಗಿರಿ ಮಹಾರಾಜ್*
ನಾಸಿರ್ ಬಾಗವಾನ ಅವರನು ಉದ್ದೇಶಿಸಿ ಮಾತನಾಡಿದ ವಿಶ್ವಭಕ್ತಿ ವೇದಿಕೆ ಆಯೋಜಕರಾದ ಬಾಳಗಿರಿ ಮಹಾರಾಜ್ ನಾಸೀರ್ ಭಾಗವಾನ ಅವರ ಈ ಕಾರ್ಯವು ಕೇವಲ ಒಂದು ದೇವಾಲಯದ ಜೀರ್ಣೋದ್ಧಾರವಲ್ಲ, ಬದಲಾಗಿ ಇದು ಸೌಹಾರ್ದತೆ ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಅವರು ನೀಡುತ್ತಿರುವ ಮಹತ್ವದ ಕೊಡುಗೆಯಾಗಿದೆ ಯಾವ ಜಾತಿದವರು ಅಂತ ನೋಡಿಬಿಡಿ ಅವರು ಮಾಡಿರುವ ಕೆಲಸವನ್ನು ನೋಡಿ ಎಂದು ಅಭಿಪ್ರಾಯಪಟ್ಟರು. ನಾಸಿರ್ ಬಾಗವಾನ ಅವರು
ಜನಸೇವೆಯೇ ಜನಾರ್ದನ ಸೇವೆ ಎಂಬ ಧೈಯದೊಂದಿಗೆ
ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಅಂತಾ ಸಾಧು ಸಂತರು ಅವರ ಸಮಾಜ್ ಮುಖಿ ಕಾರ್ಯಕ್ಕೆ ಹಾಡಿ ಹೊಗಳಿದರು.