ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ: ಮಜಲಟ್ಟಿ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ನಿಪನಾಳ ಗ್ರಾಮದ ಕು. ಕಾವೇರಿ ಪಾವಡಿ ಮಲ್ಲಾಪುರೆ ಅವರು 99%(594 ಅಂಕ) ಪಡೆದು ರಾಜ್ಯಕ್ಕೆ 5ನೇ ಸ್ಥಾನ ಗಳಿಸಿ ರಾಯಬಾಗಕ್ಕೆ, ವ್ಯಾಸಂಗ ಮಾಡಿದ ಕಾಲೇಜಿಗೆ ಹಾಗೂ ಪೋಷಕರಿಗೆ, ಹಾಗೂ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿಗೆ ಕೀರ್ತಿ ಹೆಚ್ಚಿಸಿದ್ದಾಳೆ. ಗಡಿ ಭಾಗದ ಶಿಕ್ಷಣ ಕಾಶಿ ಎಂದೆ ಖ್ಯಾತಿ ಪಡೆದ ಮಜಲಟ್ಟಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಲಾವಿ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದಿರುತ್ತಾಳೆ.
ಇನ್ನು ಕಲಾವಿಭಾಗದಲ್ಲಿ 5ನೇ ರ್ಯಾಂಕ್ ಪಡೆದ ವಿದ್ಯಾರ್ಥಿನಿಗೆ, ಜಿಲ್ಲಾಧ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು. ಗ್ರಾಮಸ್ಥರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಬಡತನದಲ್ಲಿ ಹುಟ್ಟಿ ಬೆಳೆದ ಕಾವೇರಿಗೆ ಭೇಷ್ ಅನ್ನುತ್ತಾ, ಮುಂದಿನ ವಿದ್ಯಾಭ್ಯಾಸಕ್ಕೆ, ಶಿಕ್ಷಣ ಪ್ರೇಮಿಗಳು, ಬೆಸ್ಟ್ ಆಫ್ ಲಕ್ ತಿಳಿಸುತ್ತಿದ್ದಾರೆ.