ಖಾನಾಪುರ
ಹಿರೇಅಂಗ್ರೊಳ್ಳಿಯಲ್ಲಿ ಚಿರತೆಯ ಮೃತ ದೇಹ ಪತ್ತೆ
ಖಾನಾಪುರ: 05/01/2025 ರಂದು ಸಾಯಂಕಾಲ ಸಮಯದಲ್ಲಿ ಗೋಲಿಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ಹಿರೇಅಂದ್ರೋಳ್ಳಿ ಗ್ರಾಮದ ಮಾಲ್ಕಿ ಸ ನಂ.95/3ಬಿ ರಲ್ಲಿ ಮೃತ ಚಿರತೆಯ ದೇಹ ಪತ್ತೆಯಾಗಿದ್ದು ಸ್ಥಳದಲ್ಲಿ ಚಿರತೆಯ ಉಗುರುಗಳು, ಹಲ್ಲುಗಳು, ಚರ್ಮ, ಮೂಳೆಗಳು ಹಾಗೂ ಇತರೆ ಎಲ್ಲ ಅಂಗಾಂಗಳು ಸ್ವಾಭಾವಿಕ ಸ್ಥಿತಿಯಲ್ಲಿ ಕಂಡು ಬಂದಿದ್ದು, ಮೇಲ್ನೋಟಕ್ಕೆ ಚಿರತೆಯು ವೈಸೋಸಹಜವಾಗಿ ಸ್ವಾಬಾವಿಕವಾಗಿ ಮೃತಪಟ್ಟಿರುವುದಾಗಿ ಪಶುವೈದ್ಯರು ಪ್ರಾಥಮಿಕವಾಗಿ ಪರಿಶೀಲಿಸಿ ತಿಳಿಸಿದ್ದು ಚಿರತೆಯು ಗಂಡು ಚಿರತೆಯಾಗಿದ್ದು ಸುಮಾರು 12 ವರ್ಷ ವಯಸ್ಸು ಆಗಿರುತ್ತದೆ. ಅರಣ್ಯ ಕಾಯ್ದೆ ನಿಯಮಾನುಸಾರ ಪ್ರಸ್ತುತ ಚಾಲ್ತಿ ಇರುವ ಮಾರ್ಗಸೂಚಿಗಳ ಪ್ರಕಾರ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಪಂಚರ ಸಮ್ಮುಖದಲ್ಲಿ ಮರಣೋತ್ತರ ಪರಿಕ್ಷೆ ನಡೆಸಿ ಮೃತ ದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸುಟ್ಟು ವಿಲೇವಾರಿ ಮಾಡಿದ್ದಾರೆ.
ಸದರಿ ಪ್ರಕ್ರಿಯೆಯಲ್ಲಿ ಶ್ರೀ ಮರಿಯಾ ಕ್ರೀಸ್ತು ರಾಜಾ ಡಿ ಬೆಳಗಾವಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಶ್ರೀ ಶಿವಾನಂದ ಮಗದುಮ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ನಾಗರಗಾಳಿ ಉಪ ವಿಭಾಗ ನಾಗರಗಾಳಿ ರವರು, ಡಾ: ಮನೋಹರ ಡಿ ಸಹಾಯಕ ಪಶು ನಿರ್ದೇಶಕರು ಖಾನಾಪೂರ, ಶ್ರೀ ಸಂತೋಷ ಸುಂಬಳಿ ವಲಯ ಅರಣ್ಯ ಅಧಿಕಾರಿಗಳು ಗೋಲಿಹಳ್ಳಿ, ಶ್ರೀ ಪ್ರಶಾಂತ ಮಂಗಸೂಳಿ ವಲಯ ಅರಣ್ಯ ಅಧಿಕಾರಿಗಳು ನಾಗರಗಾಳಿ ವಲಯ, ಶ್ರೀ ಮದುಸೂದನ ಎಸ್ ವಿಧಿ ವಿಜ್ಞಾನ ವನ್ಯಜೀವಿ ಸಂಶೋಧನಾ ತಜ್ಞರು, ಕಂದಾಯ ಇಲಾಖೆಯ ಸಿಬ್ಬಂದಿ ಜನರು ಹಾಗೂ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮತ್ತು ಸದಸ್ಯರು, ಗೋಲಿಹಳ್ಳಿ ವಲಯದ ಉಪ ವಲಯ ಅರಣ್ಯಾಧಿಕಾರಿಗಳು, ಹಾಗೂ ಗಸ್ತು ಅರಣ್ಯ ಪಾಲಕರು ಮತ್ತು ಸಿಬ್ಬಂದಿ ಜನರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.