ಹುಕ್ಕೇರಿ: ಕರ್ನಾಟಕ ಭೀಮ್ ಸೇನೆ (ರಿ)ಗೆ ಪತ್ರಕರ್ತ ಡಾ|| ರವಿ ಬಿ ಕಾಂಬಳೆ ಆಯ್ಕೆ.!
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನವರಾದ ಡಾ|| ರವಿ ಕಾಂಬಳೆ ಕರ್ನಾಟಕ ಭೀಮ್ ಸೇನೆಗೆ ಆಯ್ಕೆ ಆಗಿರುತ್ತಾರೆ.
ನೇರ ನುಡಿಯ ದಿಟ್ಟ ಪತ್ರಕರ್ತ ಸಮಾಜದಲ್ಲಿ ನೊಂದವರ ಧ್ವನಿಯಾಗಿ ಭ್ರಷ್ಟ ಅಧಿಕಾರಿಗಳನ್ನು ವಿರೋಧಿಸುತ್ತಾ ಎಲ್ಲಾ ಧರ್ಮ ಎಲ್ಲ ಸಮಾಜದವರ ನೋವು ಕಷ್ಟಗಳನ್ನು ಅರಿತು ಯಾರಿಗೂ ಅಂಜದೆ ಧೈರ್ಯವಾಗಿ ಸುದ್ದಿ ಮಾಡಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ತೊಂದರೆಗಳನ್ನು ನಿವಾರಿಸಿ ದುಷ್ಟರಿಂದ ಸಾಕಷ್ಟು ಅವಮಾನ ಧೈರ್ಯದಿಂದ ಸ್ವೀಕರಿಸಿ ಮಾಧ್ಯಮ ಕ್ಷೇತ್ರದಲ್ಲಿ 2024ನೇ ಸಾಲಿನ ಗೌರವ ಡಾಕ್ಟರೇಟ್ ಅವಾರ್ಡ್ ಪಡೆದ ಡಾ|| ರವಿ ಬಿ ಕಾಂಬಳೆ ಇವರನ್ನು ಗುರುತಿಸಿ ಈ
ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆ ಇದಾಗಿರತ್ತದೆ.
ಬೆಳಗಾವಿ,ಬಾಗಲಕೋಟೆ, ಹಾಗೂ ದಾರವಾಡ ವಿಭಾಗೀಯ ಅಧ್ಯಕ್ಷರಾಗಿ ಆಯ್ಕೆಯಾದ
ಡಾ|| ರವಿ ಬಿ ಕಾಂಬಳೆ ರವರು ಮುಂಬರವ ದಿನಗಳಲ್ಲಿ ದೀನ ದಲಿತರ ಏಳಿಗೆಗಾಗಿ ಹೆಚ್ಚು ಸಾಮಾಜಿಕ ಹೋರಾಟ ಮಾಡಿ ನ್ಯಾಯ ಕೊಡಿಸಲಿ ಎಂದು ಅನೇಕ ಪತ್ರಕರ್ತರು ಹಾಗು ಸಾಮಾಜಿಕ ಕಾರ್ಯಕರ್ತರು ಹಾರೈಸಿದ್ದಾರೆ.
ವಿಶೇಷವಾಗಿ ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷರಾದ ರಾಮಚಂದ್ರ ಕಾಂಬಳೆ ಅವರು ದಲಿತ ಹಿಂದುಳಿದ ಅಲ್ಪಸಂಖ್ಯಾತರು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಪಡೆಯಲು ನಿರಂತರ ಹೋರಾಟ ನಡೆಸುತ್ತಿದ್ದು, ಯುವಕರನ್ನು ಸಂಘಟಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಹೇಳಿ ಅಭಿನಂದನೆ ತಿಳಿಸಿದರು.