ಕಬ್ಬೂರ: ಕಾನೂನಿದ್ದರೂ ನಿಲ್ಲದ ಜಾತಿ ನಿಂದನೆ ಹಾಗೂ ಮಾನಭಂಗ, ದೌರ್ಜನ್ಯ ಕೊಲೆಯತ್ನ…
ಚಿಕ್ಕೊಡಿ ಪೊಲಿಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ…..
ಹೌದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸಮೀಪದ ಕಬ್ಬೂರ ಪಠ್ಠಣದಲ್ಲಿ ವಡ್ಡರ ಸಮಾಜದ ಯುವಕನಿಗೆ ಹಣದ ವ್ಯವಹಾರದ ಕುರಿತು ವಾಗ್ವಾದ ನಡೆದು ಈ ವಾಗ್ವಾದ ತಾರಕ್ಕಕೇರಿ ವಡ್ಡರ ಸಮಾಜದ ಯುವಕನಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಜೊತೆಗೆ ಜಾತಿ ನಿಂದನೆ ಮಾಡಿ ಕೊಲೆಗೆ ಪ್ರಯತ್ನ ಮಾಡಿದ್ದಾರೆಂದು ಈ ಕುರಿತು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೊನ್ನೆ ತಾನಷ್ಟೆ ಕೊಪ್ಪಳದ ಮರಕುಂಬಿ ಪ್ರಕರಣ ಮಾಸುವ ಮುನ್ನವೆ ಮತ್ತೊಂದು ಜಾತಿ ನಿಂದನೆ ಪ್ರಕರಣಗಳು ದಿನೆ ದಿನೆ ಹೆಚ್ಚುತ್ತಿವೆ.ಇದರಲ್ಲಿಯ ಪಿರ್ಯಾದಿಯು ಹಿಂದುಳಿದ ಪರಿಶಿಷ್ಠ ಜಾತಿಯ ಹಿಂದೂ ವಡ್ಡರ ಸಮಾಜದವನಿದ್ದು ಆರೋಪಿತರು
ಹಿಂದೂ ಲಿಂಗಾಯತ, ಹಣಬರ, ಕುರುಬರ, ಬ್ರಾಹ್ಮಣ, ಜೈನ್ ಸಮಾಜದವರಿರುತ್ತಾರೆ.
ಕಬ್ಬೂರ ಗ್ರಾಮದಲ್ಲಿ 12 ಜನ ಸೇರಿಕೊಂಡು ಶ್ರೀ ಬಾಲಾಜಿ ಕೋ-ಆಪರೇಟಿವ್ ಪ್ರೈಸೊಸೈಟಿ ಅಂತಾ ಮಾಡಿದ್ದು ಅದರಲ್ಲಿ ಪಿರ್ಯಾದಿಯು ಪರಿಶಿಷ್ಟ ಜಾತಿಯ ಸದಸ್ಯನಿದ್ದು, ಅಲ್ಲದೇ 25 ಜನರು ಸೇರಿ ಪ್ರತಿ ತಿಂಗಳು 10,000/- ರೂ ಗಳಂತೆ ಬಿಸಿ ಹಾಕಿ ತಿಂಗಳಿಗೊಮ್ಮೆ 2,50,000/- ರೂ ಒಬ್ಬರಿಗೆ ಕೊಡುತ್ತಿದ್ದು ಹಣ ಕೊಡಲು ತಪ್ಪಿದರೆ ಅದರ ಭದ್ರೆತಗಾಗಿ ಪಿರ್ಯಾದಿಯ 03 ಹಾಗೂ ಪಿರ್ಯಾದಿಯ ಸಹೋದರನ 02 ಚೆಕ್ಗಳನ್ನು ಬ್ಯಾಂಕಿನಲ್ಲಿ ಇಟ್ಟಿದ್ದು ಈ ಚೆಕ್ಗಳನ್ನು ದುರುಪಯೋಗ ಪಡಿಸಿಕೊಂಡು ಆರೋಪಿ ನಂ: 01,02 ಹಾಗೂ ವಿಠ್ಠಲ ಬಸಪ್ಪಾ ಪದ್ದಿ ಇವರು ಪಿರ್ಯಾದಿಯ ವಿರುದ್ದ ಚೆಕ್ ಬೌನ್ಸ್ ಕೇಸ್ ಮಾಡಿದ್ದರಿಂದ ಈ ಬಗ್ಗೆ ಪಿರ್ಯಾದಿಗೆ ನೊಟೀಸು ಬಂದಾಗ ಪಿರ್ಯಾದಿಯು ಅವರಿಗೆ ಕೇಳಿದ್ದರಿಂದ ಅವರು ಪಿರ್ಯಾದಿಗೆ ಅವಾಚ್ಯವಾಗಿ ಬೈದು, ಅವನ ಸಂಗಡ ಹೋಗಿದ್ದ ಶ್ರೀಶೈಲ ಬಡಿಗೇರ ಈತನನ್ನು ಹೊಡಿಬಡಿ ಮಾಡಿ ಜೀವಧಮಕಿ ಹಾಕಿ ಕಳುಹಿಸಿದ್ದು ನಂತರ ದಿನಾಂಕ 01/10/2024 ರಂದು ಚಿಕ್ಕೋಡಿ ಐಬಿಯಲ್ಲಿ ಪಂಚಾಯತಿ ಮಾಡಿ ಚೆಕ್ ಬೌನ್ಸ್ ಹಣ 14,50,000/- ರಗೂ ಬದಲಾಗಿ 3,50,000/- ರೂ ಹಣ ಕೊಡುವಂತೆ ಒಪ್ಪಿಸಿ ಬಾಂಡ ಮಾಡಿಸಿ ಮೂರು ತಿಂಗಳಲ್ಲಿ ಹಣ ಕೊಡಬೇಕು, ಮರುದಿನ ಸಂಘದಲ್ಲಿಟ್ಟ ಹಣ ಕೊಡಬೇಕು ಅಂತಾ ನಿರ್ಣಯ ಮಾಡಿದ್ದು ದಿನಾಂಕ: 28/10/2024 ರಂದು ಮದ್ಯಾಹ್ನ 3.10 ಗಂಟೆಗೆ ಪಿರ್ಯಾದಿಯು ಆರೋಪಿ ನಂ: 01 ಇವನಿಗೆ ಪೋನ್ ಮಾಡಿ ತನ್ನ ಪಾಲಿನ ಬಿಸಿ ಹಣ 6,20,000/- ರೂ ಹಾಗೂ ರಾಜಿ ಮಾಡಿದ ಬಾಂಡ ಜೆರಾಕ್ಸ್ ಕಾಪಿ ಕೊಡಲು ಕೇಳಿದಾಗ ಆರೋಪಿತನು ತನ್ನ ತೋಟದ ಕಡೆಗೆ ಬರಲು ತಿಳಿಸಿದ್ದರಿಂದ ಪಿರಾದಿಯು ಅಲ್ಲಿಗೆ ಹೋದಾಗ ಮೇಲ್ಕಾಣಿಸಿದ ಆರೋಪಿ ಅ.ನಂ: 01 ರಿಂದ 03 ಇವರು ಪಿರ್ಯಾದಿಗೆ ಏ ಭೋಸಡಿ ಮಗನ ನಿನೌನ ನಿನ್ನ ಹೆಂಡತಿ ವಡ್ಡರ ಜಾತಿ ಸುಳೆ ಮಗನ ಅಂತಾ ಜಾತಿ ನಿಂದನೆ ಮಾಡಿ ಟಾವೆಲದಿಂದ ಪಿರಾದಿಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ ಇನ್ನುಳಿದ ಆರೋಪಿತರು ಅವರಿಗೆ ಪ್ರಚೋದನೆ ಮಾಡಿದ್ದು, ಈ ಬಗ್ಗೆ ಪಿರ್ಯಾದಿಯ ತಾಯಿ ಆರೋಪಿತರಿಗೆ ಕೆಳಲು ಹೋದಾಗ ಆರೋಪಿ ನಂ: 01 ಇವನು ಅವಾಚ್ಯವಾಗಿ ಬೈದು ಅವಳ ಎದೆಯ ಮೇಲಿನ ಜಂಪರ, ಸೀರೆ ಹಿಡಿದು ಎಳೆದಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಅದೆ.
ವರದಿ:-ವಿವೇಕಾನಂದ ಕತ್ತಿ