ರಾಯಬಾಗ:ಬಾಬು ಜಗಜೀವನರಾಮ್ ಅವರ 116 ನೇ ವರ್ಷದ ಜಯಂತಿ. ಬೆಳಗಾವಿ ಜಿಲ್ಲೆಯ ರಾಯಬಾಗ ಪಠ್ಠಣದ ಅಂಬೇಡ್ಕರವರ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿಯಾದ ಡಾ!! ಬಾಬು ಜಗಜೀವನ ರಾಮ್ ರವರ 116ನೇ ಜಯಂತಿಯನ್ನು ರಾಯಬಾಗ ತಾಲೂಕಾ ಪಂಚಾಯಿತಿಯ ಸಭಾ ಭವನದಲ್ಲಿ ಕರ್ನಾಟಕ ಸರ್ಕಾರದ ತಾಲೂಕಾ ಆಡಳಿತ, ತಾಲೂಕಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಆಚರಿಸಲಾಯಿತು. ಈ ಜಯಂತಿಯ ಕಾರ್ಯಕ್ರಮದ ವೇದಿಕೆಯ ದಿವ್ಯ ಸಾನಿಧ್ಯವನ್ನ ಪರಮಪೂಜ್ಯ ಶ್ರೀ ಅನಂತಾನಂದ ಮಹಾಸ್ವಾಮಿಗಳು ಆದಿಜಾಂಭವ ಮಠ ರಾಯಬಾಗ ಇವರು ವಹಿಸಿದ್ದರು. ಅಧ್ಯಕ್ಷತೆಯನ್ನ ಉಪ ತಹಶೀಲ್ದಾರರಾದ ಶ್ರೀ ಪರಮಾನಂದ ಮಂಗಸೂಳೆ, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ರಾಯಬಾಗ ಶ್ರೀ ವಿಠ್ಠಲ ಚಂದರಗಿ, ಶ್ರೀ ಎನ್ ವಿ ಹಿರೇಮಠ, ಶ್ರೀಮತಿ ಪ್ರಭಾವತಿ ಪಾಟೀಲ, ಇವರೆಲ್ಲ ವೇದಿಕೆಯನ್ನ ಅಲಂಕರಿಸಿದ್ದರು. ಕಾರ್ಯಕ್ರಮದ ನಿರೂಪನೆಯನ್ನ ಶಂಕರ ಕೊಡತೆ, ಶ್ರೀ ಯಲ್ಲಪ್ಪ ಭಜಂತ್ರಿ ಇವರು ವಂದನಾರ್ಪಣೆ ಮಾಡಿದರು ಶ್ರೀ ಶಾನೂರ ಮಹಾದೇವ ಐಹೋಳೆ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ಧರ್ಜೆಯ ಮಹಾವಿದ್ಯಾಲಯದ ರಾಯಬಾಗ ಇವರು ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಡಾ!! ಬಾಬು ಜಗಜೀವನ ರಾಮ್ ರವರ ಜೀವನ ಚರಿತ್ರೆಯನ್ನ ವಿವರವಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮವು ಸುಮಾರು 11 ಘಂಟೆಗೆ ರಾಯಬಾಗದ ಡಾ!! ಬಾಬು ಜಗಜೀವನ ರಾಮ್ ರವರ ಸಮುದಾಯ ಭವನದ ಮುಂಭಾಗ ಇರುವ ಡಾ!! ಬಾಬು ಜಗಜೀವನ ರಾಮ ರವರ ಪುತ್ತಳಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆ ಯು ಪ್ರಾರಂಭವಾಗಿ ಡೊಳ್ಳು, ಹಲಗೆ, ಕರಡಿ ಮಜಲಿನೊಂದಿಗೆ ತಾಲೂಕಿನ ಎಲ್ಲ ಗ್ರಾಮಗಳಿಂದ ಆಗಮಿಸಿದ್ದ ಮಾದಿಗ ಸಮಾಜದ ಮುಖಂಡರೊಂದಿಗೆ ರಥದಲ್ಲಿ ಡಾ!! ಬಾಬು ಜಗಜೀವನ ರಾಮ್ ರವರ ಬಾವಚಿತ್ರದ ಮತ್ತು ಆದಿಜಾಂಭವ ಮಠದ ಪೀಠಾಧಿಕಾರಿಗಳಾದ ಶ್ರೀ ಅನಂತಾನಂದ ಮಹಾಸ್ವಾಮಿಗಳನ್ನ ಬೆಳ್ಳಿ ರಥದಲ್ಲಿ ಮೆರವಣಿಗೆಯ ಮೂಲಕ ಮುಖ್ಯ ರಸ್ತೆಯ ಮೂಲಕ ಹಾಯ್ದು ಪಟಾಕಿ ಸಿಡಿಮದ್ದಿನೊಂದಿಗೆ ವಿಜ್ರಂಭಣೆಯಿಂದ ಉತ್ಸವವು ಡಾ!! ಬಾಬಾಸಾಹೇಬ ಅಂಬೇಡ್ಕರವರ ವೃತ್ತಕ್ಕೆ ಆಗಮಿಸಿ ಪುತ್ತಳಿಗೆ ಮಾಲಾರ್ಪಣೆ ಮಾಡಿದ ನಂತರ ರಾಯಬಾಗದ ತಾಲೂಕಿನ ಉತ್ಸವ ಸಮಿತಿಯು ತಾಲೂಕಾ ಪಂಚಾಯಿತಿ ಸಭಾ ಭವನದಲ್ಲಿ ಜಯಂತಿಯ ಕಾರ್ಯಕ್ರಮವನ್ನ ಅಚ್ಚುಕಟ್ಟಾಗಿ ಮಾದರಿ ನೀತಿ ಸಂಹಿತೆಯ ಅನುಸಾರದ ಪ್ರಕಾರ ಮಾಡಲಾಯಿತು. ಜಯಂತಿಯ ಉತ್ಸವ ಸಮಿತಿಯ ಸದಸ್ಯರಾದ ಶ್ರೀ ಸಂಜು ಮೈಶಾಳೆ, ವಕೀಲರಾದ ಶ್ರೀ ವಿನಯನಿಧಿ ಕಮಾಲ, ಶ್ರೀ ರಾಕೇಶ ಅವಳೆ, ಶ್ರೀ ರಿತೇಶ ಅವಳೆ, ಶ್ರೀ ರಾಘವೇಂದ್ರ ಅವಳೆ, ಶ್ರೀ ರವಿ ದೇವರಮನಿ, ಶ್ರೀ ಸಂದೀಪ ಅವಳೆ, ವಿನಯರಾಜ ಸನದಿ, ಶ್ರೀ ಸುಭಾಷ ಮಾದಿಗ, ಕಾಡೇಶ ಮಾದಿಗ, ರಾಜು ಅವಳೆ, ಶ್ರೀ ದೇವಾನಂದ ಸನದಿ, ಶ್ರೀ ರಾಜು ಮೈಶಾಳೆ, ರಾಜು ಅವಳೆ ಮತ್ತು ತಾಲೂಕಿನ ಎಲ್ಲ ಗ್ರಾಮಗಳಿಂದ ಮಾದಿಗ ಸಮಾಜದ ಮುಖಂಡರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿ ಈ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಿದ ಹಾಗೂ ಕಾರ್ಯಕ್ರಮವನ್ನ ಯಶಸ್ವಿ ಗೊಳಿಸಿದ್ದ ಎಲ್ಲ ನಮ್ಮ ಮಾದಿಗ ಸಮಾಜದ ಬಂದುಗಳಿಗೆ ಹೃದಯ ಪೂರ್ವಕ ಅಭಿನಂದನೆಗಳನ್ನ ಸಲ್ಲಿಸಿದರು.ವರದಿ:-ಚಂದ್ರು ತಳವಾರ