ಮತ್ತೆ ಒಂದಾದ ಬಂದ್ರ ಮಾಮಾನ ಬುಲೆಟ್ ಗಾಡಿ ಹಾಡಿನ ಖ್ಯಾತಿಯ ಪರಸು ಕೊಲುರ ಹಾಗು ನಾ ಡ್ರೈವರಾ ನಿ ನನ್ನ ಲವ್ವರಾ ಹಾಡಿನ ಗಾಯಕ ಮಾಳು ನಿಪನಾಳ
ಹೌದು ಉತ್ತರ ಕರ್ನಾಟಕದ ಜಾನಪದ ಲೋಕದ ಅಪ್ಪಾ ಎಂಬ ಖ್ಯಾತಿ ಪಡೆದಿದ್ದ ಪರಸು ಕೋಲೂರ ಮೇಲೆ ಜಾನಪದ ಗಾಯಕ ಮಾಳು ನಿಪನಾಳ ನಿಂದ ಕಳೆದ ವರ್ಷ ಕಾರಣಾಂತರಗಳಿಂದ ಹಲ್ಲೆ ನಡೆದಿತ್ತು.
ಆದರೆ ಇದೀಗ ಈ ಇಬ್ಬರು ಯುವ ಜಾನಪದ ಗಾಯಕರು ಮತ್ತೆ ಒಂದಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟೇ ಅಲ್ಲದೆ ಉದಗಟ್ಟಿಯ ಉದ್ದಮ್ಮನ ಜಾತ್ರೆ ನಿಮಿತ್ತ, ಹಳೆಯ ದ್ವೇಷವನ್ನು ಮರೆತು ಇ ಇಬ್ಬರು ಖ್ಯಾತ ಜಾನಪದ ದಿಗ್ಗಜರು ವಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಅದು ಏನೇ ಆಗಿರಲಿ ಹಳೆಯದನ್ನು ಮರೆತು, ಇಬ್ಬರೂ ಒಂದಾಗುತ್ತಿರುವುದು ಮತ್ತೆ ಜಾನಪದ ಲೋಕಕ್ಕೆ ಹೊಸ ಕಳೆ ಬಂದಂತಾಗಿದೆ.
ಅಷ್ಟೇ ಅಲ್ಲದೆ, ಮಾಳು ನಿಪನಾಳ ಹಾಗೂ ಪರಶು ಕೋಲೂರ್ ಇವರ ಮಾವ ಅಳಿಯನ ಸಂಬಂಧದ ಮೇಲೆ ಯಾವ ಕೆಟ್ಟ ಕಣ್ಣು ಬೀಳದಿರಲಿ, ಇವರ ಸ್ನೇಹ, ಇನ್ನಷ್ಟು ಇಮ್ಮಡಿಯಾಗಲಿ ಎಂಬುವುದು ನಮ್ಮ ಟಿವಿ3 ಸುದ್ಧಿವಾಹಿನಿಯ ಆಶಯವಾಗಿದೆ.
ವರದಿ ಚಂದ್ರು ತಳವಾರ ಟಿವಿ3 ನ್ಯೂಸ್ ಕನ್ನಡ ನಿಪಾನಾಳ