ಹುಕ್ಕೇರಿ:ಟ್ರ್ಯಾಕ್ಟರ ಕಳ್ಳರ ಬಂಧನ, ಟ್ರ್ಯಾಕ್ಟರ ವಶಪಡಿಸಿಕೊಂಡ ಹುಕ್ಕೇರಿ ಪೋಲಿಸರು.ಮತ್ತೆ ಸುದ್ದಿಯಲ್ಲಿ ಹುಕ್ಕೇರಿ ಪೋಲಿಸರು.
ದಿನಾಂಕ:28/04/2023 ರಂದು ರಾತ್ರಿ ಹುಕ್ಕೇರಿ ತಾಲ್ಲೂಕಿನ ಗೌಡವಾಡ ಗ್ರಾಮದಲ್ಲಿ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಕಳ್ಳತನವಾಗಿದ್ದು ಆ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶ್ರೀ ಎಂ.ಎಂ. ತಹಶೀಲ್ದಾರ ಪಿ.ಐ. ಹುಕ್ಕೇರಿ ಇವರು ಮಾನ್ಯ ಎಸ್.ಪಿ. ಸಾಹೇಬರು ಬೆಳಗಾವಿ ಜಿಲ್ಲೆ ಶ್ರೀ ಎಂ. ವೇಣುಗೋಪಾಲ ಹೆಚ್ಚುವರಿ ಎಸ್.ಪಿ. ಬೆಳಗಾವಿ, ಶ್ರೀ ದೂದಪೀಠ ಎಚ್. ಮುಲ್ಲಾ ಡಿ.ಎಸ್.ಪಿ, ಗೋಕಾಕರವರ ಮಾರ್ಗದರ್ಶನದಲ್ಲಿ ಸದರಿ ಪ್ರಕರಣವನ್ನು ಬೆನ್ನಟ್ಟಿ ಆರೋಪಿತರ ಬಗ್ಗೆ ಮಾಹಿತಿ ಕಲೆಹಾಕಿ ದಿನ ದಿನಾಂಕ:06/07/2023 ರಂದು ಟ್ರ್ಯಾಕ್ಟರ್ ಎಂಜಿನನ್ನು ಕಳ್ಳತನ ಮಾಡಿದ ಇಬ್ಬರು ಆರೋಪಿತರನ್ನು ಬಂಧಿಸಿ ಅವರಿಂದ ಕಳ್ಳತನವಾಗಿದ್ದ ರೂ.2,50,000/- ಮೌಲ್ಯದ ಮಹೀಂದ್ರಾ ಕಂಪನಿಯ ಟ್ರ್ಯಾಕ್ಟರ್ ಎಂಜಿನನ್ನು ವಶಪಡಿಸಿಕೊಂಡು ಅಪರಾಧ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಟ್ರ್ಯಾಕ್ಟರ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಶ್ರೀ ಎಮ್. ಎಮ್ ತಹಶಿಲ್ದಾರ. ಪಿ.ಐ
ಹುಕ್ಕೇರಿ ಹಾಗೂ ಸಿಬ್ಬಂದಿ ಜನರಾದ ಶ್ರೀ ಎ.ಎಸ್. ಸನದಿ ಎ.ಎಸ್.ಐ, ಶ್ರೀ ಕೆ.ಎನ್, ಪಿಂಜಾರ ಮಂಜುನಾಥ ಕಬ್ಬುರೆ,
ಎ.ಎಸ್.ಐ, ಶ್ರೀ ಸಿ.ಡಿ. ಪಾಟೀಲ ಸಿಎಚ್ ಬ.ನಂ.1361, ಶ್ರೀ ಜಿ.ಎಸ್. ಕಾಂಬಳೆ ಸಿಪಿಸಿ 3255, ಶ್ರೀ
ಎಸ್.ಆರ್. ರಾಮದುರ್ಗ ಸಿಪಿಸಿ 1512, ಶ್ರೀ ಯು. ವಾಯ್ ಅರಭಾಂವಿ ಸಿಪಿಸಿ 3769, ಶ್ರೀ ಎ. ಎಲ್
ನಾಯಕ ಸಿ.ಪಿ.ಸಿ 3277, ಶ್ರೀ ಎಂ. ಎಸ್. ಕಲ್ಲೂರ ಸಿಪಿಸಿ ಬ.ನಂ.3042 ಹಾಗೂ ಜಿಲ್ಲಾ ಪೊಲೀಸ್
ಕಛೇರಿಯ ಟೆಕ್ನಿಕಲ್ ಸೆಲ್ ವಿಭಾಗ ವಿನೋದ ಠಕ್ಕನ್ನವರ ಇವರ ಕಾರ್ಯವನ್ನು ಮಾನ್ಯ ಎಸ್.ಪಿ.
ಸಾಹೇಬರು ಮುಕ್ತ ಕಂಠದಿಂದ ಶ್ಲಾಘಿಸಿರುತ್ತಾರೆ.
ಹಾಗೂ ಇದೇ ರೀತಿ ಅಪರಾಧ ಪ್ರಕರಣಗಳನ್ನು ಪತ್ತೆ
ಹಚ್ಚಲು ಸೂಚಿಸಿರುತ್ತಾರೆ.
ಮಾನ್ಯ ಎಸ್.ಪಿ. ಸಾಹೇಬರು ಸಾರ್ವಜನಿಕರು ಅವರಿಗೆ ಸಂಬಂಧ ಪಟ್ಟ ವಾಹನಗಳನ್ನು ಸುರಕ್ಷಿತ ಸ್ಥಳದಲ್ಲಿ ಪಾರ್ಕ ಮಾಡುವಂತೆ ಹಾಗೂ ವಾಹನಗಳಿಗೆ ಜಿ.ಪಿ.ಎಸ್., ಸೈರನ್ ಮುಂತಾದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಕೋರಿರುತ್ತಾರೆ.
ವರದಿ ಚಂದ್ರು ತಳವಾರ


