ಹುಕ್ಕೇರಿ: ಸಹಕಾರಿ ಕ್ಷೇತ್ರದಲ್ಲಿ ಉತ್ತುಂಗ ಸಾಧನೆ ಮಾಡಲು ಆಡಳಿತ ಮಂಡಳಿ ಜೊತೆಗೆ ಸದಸ್ಯ- ಗ್ರಾಹಕರ ಸಹಕಾರ ಮುಖ್ಯವಾಗಿದೆ ಎಂದು ಕ್ಯಾರಗುಡ್ ಅವುಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಹಳೆ ಬಸ್ನಿಲ್ದಾಣ ಬಳಿಯ ಖತಗಲ್ಲಿ ಕಾಂಪ್ಲೆಕ್ಸಲ್ಲಿ ಶುಕ್ರವಾರ ಹೊಸದಾಗಿ ಆರಂಭವಾದ ಮಹಾವೀರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರ ಏಳಿಗೆಯಲ್ಲಿ ಪರಸ್ಪರರ ಸಹಕಾರವೇ ಪ್ರಮುಖ ಕಾರಣ ಎಂದರು.
ಸಹಕಾರಿ ಸಂಸ್ಥೆಗಳನ್ನು ಆರಂಭಿಸುವುದು ಸುಲಭ. ಆದರೆ, ಅವುಗಳನ್ನು ಮುನ್ನಡೆಸಿಕೊಂಡು ಹೋಗುವುದು ಇಂದಿನ ದಿನಗಳಲ್ಲಿ ಅತ್ಯಂತ ಕಷ್ಟದ ಕೆಲಸವಾಗಿದೆ.
ನೂನತವಾಗಿ ಆರಂಭವಾದ ಈ ಮಹಾವೀರ ಅರ್ಬನ್ ಕ್ರೆಡಿಟ್ ಸೊಸೈಟಿಯು ಭವಿಷ್ಯದಲ್ಲಿ ಉತ್ತುಂಗ ಸ್ಥಾನ ಪಡೆಯುವಂತಾಗಬೇಕು.
ಈ ಮೂಲಕ ಸಮಾಜದ ಪ್ರಗತಿಯಲ್ಲಿ ಸಂಸ್ಥೆ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವೀರ ಸಮೂಹ ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿ ಈ ನೂತನ ಸಂಸ್ಥೆ ಕಾರ್ಯನಿರ್ವಹಿಸಲಿದೆ.
ಸಹಕಾರಿ ಮೂಲಕ ಬೀದಿ ಬದಿ ವ್ಯಾಪಾರಿಗಳು, ಬಡ, ಮಧ್ಯಮ ವರ್ಗದವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಪುರಸಭೆ ಮಾಜಿ ಅಧ್ಯಕ್ಷ ಎ.ಕೆ.ಪಾಟೀಲ, ಮಾಜಿ ಉಪಾಧ್ಯಕ್ಷ ಗುರು ಕುಲಕರ್ಣಿ, ರಿಡ್ಸ್ ಸಂಸ್ಥೆ ಅಧ್ಯಕ್ಷ ಅಶೋಕ ಪಾಟೀಲ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಚೌಗಲಾ, ಮುಖಂಡರಾದ ಪಿ.ಎಸ್.ಮುತಾಲಿಕ, ರವಿ ಕರಾಳೆ, ರೋಹಿತ ಚೌಗಲಾ, ಬಾಹುಬಲಿ ಸೊಲ್ಲಾಪುರೆ, ಸಂಜಯ ನಿಲಜಗಿ, ನಿರ್ದೇಶಕರಾದ ಅಪ್ಪಾಸಾಹೇಬ ಚೌಗಲಾ, ಅಕ್ಷಯ ಕಬಾಡಗೆ, ಗೋಮಟೇಶ ಶೆಟ್ಟಿ, ಆದರ್ಶ ಪಾಟೀಲ, ಜ್ಯೋತಿಬಾ ಪಂತೋಜಿ, ಮಹ್ಮದಹನೀಪ ಸನದಿ, ಶಂಕರ ಗೋಟೂರ, ಅಶೋಕ ಚೌಗಲಾ, ಉದಯ ಕಾಂಬಳೆ, ಅನುರಾಧಾ ರಜಪೂತ, ಭಾರತಿ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ ಪ್ರಜ್ವಲ ನಿಲಜಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜೇಂದ್ರ ಪಾಟೀಲ ನಿರೂಪಿಸಿದರು. ಸಂತೋಷ ರಜಪೂತ
ವಂದಿಸಿದರು. ವರದಿ ಚಂದ್ರು ತಳವಾರ


