ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಸುಳ್ಳು ಹೇಳಿ ಆನೆ ಪ್ರಮಾನಕ್ಕೆ ಮುಂದಾದರಾ ಮಾಜಿ ಶಾಸಕ ಪಿ ರಾಜೀವ್.?
ಬೆಳಗಾವಿ: ಜಿಲ್ಲೆಯ ಕುಡಚಿ ವಿಧಾನಸಭಾ ಮತಕ್ಷೇತ್ರದ ಮುಗಳಖೋಡ ಪಟ್ಟಣದಲ್ಲಿ ಕೆಲವು ತಿಂಗಳ ಹಿಂದೆ ಅಷ್ಟೇ,ಈ ಹಿಂದೆ ಶಾಸಕರಾಗಿದ್ದ ಪಿ ರಾಜೀವ ಅವರು ದುರ್ಗಾದೇವಿ ದೇವಸ್ಥಾನದ ಶಿಖರದ ಭೂಮಿ ಪೂಜೆಯನ್ನು ನೆರವೇರಿಸಿ ೪೦ ಲಕ್ಷ ಸರಕಾರದಿಂದ ಮಂಜೂರಾಗಿದೆ ಎಂದು ಹೇಳಿದ್ದರು. ಆದರೆ ಸರಕಾರದಿಂದ ಯಾವುದೇ ದುಡ್ಡು ಮಂಜುರಾಗದ ಹಿನ್ನೆಲೆಯಲ್ಲಿ ಮಾದಿಗ ಸಮಾಜದವರು ಪ್ರತಿ ಮನೆಗೆ ೧ ಸಾವಿರ ರೂಪಾಯಿಯಂತೆ ಮುಗಳಕೋಡ ಮಾದಿಗ ಸಮಾಜದ ಪ್ರತಿ ಕುಟುಂಬದಿಂದ ದೇನಿಗೆ ಸಂಗ್ರಹಿಸಲಾಗಿತ್ತು. ಆದರೆ ಇದುವರೆಗೆ 8 ತಿಂಗಳುಗಳು ಕಳೆದರೂ ಮುಜರಾಯಿ ಇಲಾಖೆಯಿಂದ ಯಾವುದೇ ಮಂಜೂರು ಆಗಿರುವುದಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಿ ರಾಜು ಅವರು ಪಟ್ಟಣಕ್ಕೆ ಬಂದಾಗ ಅಲ್ಲಿನ ಸ್ಥಳೀಯ ನಾಯಕರು ಪ್ರಶ್ನೆ ಮಾಡುತ್ತಾರೆ.ಆಗ ವಿಚಲಿತರಾದ ಪಿ ರಾಜು ತಮ್ಮ ವಲಸೆ ಬದಲಾಯಿಸಿ ಅಲ್ಲಿನ ಮತದಾನ ಬಂಧುಗಳಿಗೆ ದುರ್ಗಾದೇವಿ ಶಿಖರಕ್ಕೆ ನನ್ನ ಸ್ವಂತ ಹಣ ಖರ್ಚು ಮಾಡಿ ಗುಡಿ ಕೆಲಸ ಪ್ರಾರಂಭಿಸುತ್ತೇನೆ ಎಂದು ಹೇಳಿ ಅಲ್ಲಿನ ಅಮಾಯಕ ಜನರನ್ನು ಯಾಮಾರಿಸಿರುವ ಹಾಗೆ ಕಾಣಿಸುತ್ತಿದೆ. ಅದಕ್ಕೆ ಅಲ್ಲಿನ ಮಾದಿಗ ಸಮಾಜದ ಜನರು ತನ್ನ ಆಮೀಶಕ್ಕೆ ಬಲಿಯಾಗಿ ಆನೆ ಪ್ರಮಾಣ ಮಾಡುತ್ತಿರುವುದು ಕಂಡು ಬಂದಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಅಲ್ಲಿನ ಜನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿದ ಹಾಗೆ ಆಗಿದೆ. ಸರಕಾರ ಇಂತಹ ವ್ಯವಸ್ಥತೆಗೆ ಚೆಕ್ಮೆಟ್ ಹಾಕಬೇಕು ಎನ್ನುವುದು ಅಲ್ಲಿನ ಗ್ರಾಮಸ್ಥರ ಒತ್ತಾಯವಾಗಿದೆ.:-ಚಂದ್ರು ತಳವಾರವರದಿ


