ಹುಟ್ಟುಹಬ್ಬಕ್ಕೆ ಖ್ಯಾತ ಜಾನಪದ ಗಾಯಕನಿಗೆ ಆಮಂತ್ರಣ.! ಬಸವರಾಜ ಮರದಿ ಬರ್ತ್ಡೆಗೆ ಬಂದ ಪರಸು ಕೊಲೂರ.!
ಎಸ್ ವೀಕ್ಷಕರೇ,ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕಂಕನವಾಡಿ ಪಟ್ಟಣ ಪಂಚಾಯಿತಿಯ ಸದಸ್ಯರಾದ ಬಸವರಾಜ ಮರದಿಯವರು ಇಂದು ತಮ್ಮ ತೋಟದ ಮನೆಯಲ್ಲಿ ಸಹಸ್ರಾರು ಸಂಖ್ಯೆ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಅಭಿಮಾನಿಗಳ ಸಹಕಾರದೊಂದಿಗೆ 2 ಕ್ವಿಂಟಾಲ್ 11 ಕೆಜಿ ತೂಕ ಹೊಂದಿರುವ ಬೃಹತ್ತಾಕಾರದ ಕೇಕ್ ಕಟ್ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವರು.
ತಂದೆ ಶಿವಪ್ಪ ಮರದಿ, ತಾಯಿ ಪಾರ್ವತಿ, ಅವರ ಕಿರಿಯ ಮಗನಾಗಿ ಜನಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಿಸಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಯುವ ನಾಯಕ ಬಸವರಾಜ ಮರದಿ ಇವರು ೪೬ ನೇ ಹುಟ್ಟುಹಬ್ಬವನ್ನ ವಿಶೆಷವಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ಅದು ಹೇಗೆ ಅಂತಿರಾ ಕೆಲವರು ಕೇಕ ಕಟ್ ಮಾಡುವ ಮೂಲಕ ಆಚರಿಸಿಕೊಳ್ಳುತ್ತಾರೆ ಹಾಗೇಯೆ ಅನಾಥ ಆಶ್ರಮದಲ್ಲಿ ಊಟ ಹಾಕುವ ಮುಖಾಂತರ ಆಚರಿಸಿಕೊಳ್ಳುತ್ತಾರೆ.
ಆದರೆ ಬಸವರಾಜ ಮರದಿಯವರು ಉತ್ತರ ಕರ್ನಾಟಕ ಜಾನಪದ ಕೊಗಿಲೆ ಬಂದ್ರ ಮಾಮಾನ ಬುಲೇಟ ಗಾಡಿ ಎಂಬ ಗಾಯಕ ಪರಸು ಕೋಲೂರ್ ಆರ್ಕೆಸ್ಟ್ರಾ ಮುಖಾಂತರ ಅಭಿಮಾನಿಗಳಿಗೆ ಮನರಂಜನೆ ಮಾಡುವ ಮುಲಕ ಹಾಗೂ ಜಾನಪದ ಕಲಾವದರಿಗೆ ಹಾಡು ಹಾಡುವ ಅವಕಾಶ ಕೊಡುವ ಮೂಲಕ ಪರಸು ಕೋಲೂರನಿಗೆ ಆಮಂತ್ರಣ ನೀಡಲಾಗಿದೆ.
ಇದು ವಿಶೇಷವಾದ ಹುಟ್ಟುಹಬ್ಬ ಎಂದರೂ ತಪ್ಪಾಗಲಾರದು ಎಂದು ಯುವಕರ ತಂಡ ಶುಭಾಶಯ ಕೊರುವದರ ಜೊತೆಗೆ ಪರಸು ಕೋಲೂರನ ಸಂಗ ಕೇಳಲು ದಾರಿ ಕಾಯುತ್ತಿದ್ದಾರೆ.
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ.
ಈ ಹೊಸ ವರ್ಷವೂ ಕೂಡ ನಿನಗೆ ಆನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಹಾರೈಸುವೆ ಹುಟ್ಟು ಹಬ್ಬದ ಶುಭಾಶಯಗಳು…
ವರದಿ:-ಚಂದ್ರು ತಳವಾರ ಟಿವಿ3 ನ್ಯೂಸ್ ಕನ್ನಡ ರಾಯಬಾಗ


